February 22, 2026

Newsnap Kannada

The World at your finger tips!

ramdurge

ರಾಮದುರ್ಗದಲ್ಲಿ ಇಬ್ಬರು ಮಕ್ಕಳು ಸೇರಿ ಪತಿ, ಪತ್ನಿ ವಿಷ ಸೇವಿಸಿ ಆತ್ಮಹತ್ಯೆ

Spread the love

ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವೀನ್ ನಗರದಲ್ಲಿ ಮಂಗಳವಾರ ನಡೆದಿದೆ.

ಪ್ರವೀಣ್ ರಮೇಶ್ ಶೆಟ್ಟರ್ (36), ರಾಜೇಶ್ವರಿ (27), ಅಮೃತಾ (8) ಅದ್ವಿಕ್ (6) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕ ಮಕ್ಕಳಿಬ್ಬರು ಮಂಚ ಕೆಳಗೆ, ತಾಯಿ ರಾಜೇಶ್ವರಿ ಹಾಸಿಗೆ ಮೇಲೆ ಹಾಗೂ ಪತಿ ಪ್ರವೀಣ್ ಅಕ್ಕ ಪಕ್ಕದಲ್ಲಿ ತಲೆ ಇಟ್ಟು ಕೊನೆಯುಸಿರೆಳೆದ್ದಾರೆ.

ಮಂಗಳವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ನಾಲ್ವರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!