December 19, 2024

Newsnap Kannada

The World at your finger tips!

protest,litreature,politics

Huge protests in Srirangapatna demanding restriction

ಮುತಾಲಿಕ್ , ಋಷಿಸ್ವಾಮೀಜಿಗೆ ನಿರ್ಬಂಧಕ್ಕೆ ಒತ್ತಾಯಿಸಿ ಶ್ರೀರಂಗಪಟ್ಟದಲ್ಲಿ ಬೃಹತ್ ಪ್ರತಿಭಟನೆ

Spread the love

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶನಿವಾರ ಕೋಮುವಾದ ಹರಡಲು ಪ್ರಯತ್ನಿಸಿತ್ತಿರುವ ಕಪಟ ಸ್ವಾಮಿಗಳಾದ ರಿಷಿಕುಮಾರ್ ಮತ್ತು ಪ್ರಮೋದ್ ಮುತಾಲಿಕನಿಗೆ ಜಿಲ್ಲೆಗೆ ಪ್ರವೇಶ ಮಾಡದಂತೆ ನಿರ್ಬಂದ ಹೇರಬೇಕೆಂದು ಆಗ್ರಹಿಸಿ ಸಮಾನ ಮನಸ್ಕರ ವೇದಿಕೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇದನ್ನು ಓದಿ –ಬಿಜೆಪಿ ಮುಖಂಡ ಅನಂತ್ ಆತ್ಮಹತ್ಯೆ ನಂತರ ಸಿಕ್ಕ ಡೆತ್ ನೋಟ್ ಬರೆದದ್ದು ಯಾರು?

ಪಟ್ಟಣದ ಕುವೆಂಪು ಪ್ರತಿಮೆಗೆ ಹೂ ಗುಚ್ಚ ಅರ್ಪಿಸಿ ಹೊರಟ ಸಮಾನ ಮನಸ್ಕರ ವೇದಿಕೆಯ ನೂರಾರು ಜನ ಕಾರ್ಯಕರ್ತರು ಪೇಟೆ ಬೀದಿ ಮೂಲಕ ಮೆರವಣಿಗೆ ಹೊರಟು ತಹಶೀಲ್ದಾರ್ ಕಛೇರಿ ತಲುಪಿದರು.

ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ, ರೈತ ಸಂಘ ರಕ್ಷಣಾ ವೇದಿಕೆ ಕಾರ್ಯಕರ್ತರು ರಿಷಿ ಕುಮಾರ್ ಮತ್ತು ಪ್ರಮೋದ್ ಮುತಾಲಿಕ್ ವಿಷಯದಲ್ಲಿ ಜಿಲ್ಲಾಡಳಿತ ಹೊಂದಿರುವ ಮೃದು ದೋರಣೆ ವಿರುದ್ಧ ಅಸಮಾಧಾನ ಹೊರಹಾಕಿದರು.

ಸೌಹಾರ್ದತೆ ಕದಡಲು ನಿರಂತರ ಪ್ರಯತ್ನ ಮಾಡುತ್ತಿರುವ ಈ ಇಬ್ಬರನ್ನು ಜಿಲ್ಲೆಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಸಮಾನ ಮನಸ್ಕರ ವೇದಿಕೆಯ ಲಕ್ಷಣ್ ಚೀರನಹಳ್ಳಿ,ಇತಿಹಾಸ ತಜ್ಞ ಡಾಕ್ಟರ್ ನಂಜರಾಜೇ ಅರಸ್, ರೈತ ಸಂಘದ ಮಂಜೇಶ ಗೌಡ, ದಸಂಸದ ಕುಬೇರಪ್ಪ, ಪ್ರಗತಿಪರ ಚಿಂತಕ ಹಾಗೂ ವಕೀಲ ವೆಂಕಟೇಶ್ ಮುಸ್ಲಿಂ ಸಂಘಟನೆಯ ತಾಯರ್ ಜನವಾದಿ ಮಹಿಳಾ ಸಂಘಟನೆಯ ಸುನಿತಾ ಕನ್ನಡ ಸಂಘಟನೆಯ ಪ್ರಿಯಾ ದಸಂಸದ ಸುರೇಶ ಸೇರಿದಂತೆ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನೂರಾರು ಪ್ರಗತಿಪರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Copyright © All rights reserved Newsnap | Newsever by AF themes.
error: Content is protected !!