ಮೂವರು ಸ್ವಾತಂತ್ರ್ಯ ಯೋಧರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

Team Newsnap
2 Min Read

ಸ್ವತಂತ್ರ ಸಂಗ್ರಾಮದಲ್ಲಿ ದೇಶಪ್ರೇಮ ಮೆರೆದ ಭಗತ್ ಸಿಂಗ್ ,ರಾಜ್ ಗುರು ,ಸುಖದೇವ್, ಇವರುಗಳ ಬಲಿದಾನದ ನೆನಪಿನಲ್ಲಿ
ಬೃಹತ್ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತವಾಗಿ 135ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ವಿಶೇಷವಾಗಿ ವೀರ ಯೋಧರನ್ನು ಸ್ಮರಿಸಲಾಯಿತು.

ರಕ್ತದಾನ ಮಹಾದಾನ ಗೋಭಕ್ತ ಸಂಘಟನೆ ಟ್ರಸ್ಟ್,ಮತ್ತು ಜೆಸಿಐ ಮೈಸೂರು ರಾಯಲ್ ಸಿಟಿ ಹಾಗೂ ನ್ಯಾಷನಲ್ ಇಂಟಿಗ್ರೇಟೆಡ್ ಫೋರಂ ಆಫ್ ಆರ್ಟಿಸ್ಟ್ ಮತ್ತು ಆ್ಯಕ್ಟಿವಿಸ್ಟ್ (ನೀಫಾ )ಸಂಸ್ಥೆ ಹಾಗೂ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಕಾರ್ಯ ಕ್ರಮ ಜರುಗಿತು.

ಈ ವೇಳೆ ಮಾತನಾಡಿದ
ಗಿರೀಶ್ ಎಸ್.ಇ ದೇಶಪ್ರೇಮ ಬೆಳಸಿ ಕೊಳ್ಳಲು ಯುವಪೀಳಿಗೆ ಮುಂದಾದರೆ ಭಾರತವೂ ಎಲ್ಲಾ ಕ್ಷೇತ್ರದಲ್ಲೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದು, ಭವ್ಯಭಾರತದ ಸ್ವತಂತ್ರಕ್ಕಾಗಿ ಹೋರಾಟಗಳು ಮತ್ತು ಯುದ್ಧ‌ನಡೆದಾಗ ಸ್ವಾತಂತ್ರ್ಯ ಹೋರಾಟಗಾರರ ಯೋಧರ ರಕ್ತಪಾತವಾಗಿರುತ್ತದೆ ಮಹಾತ್ಮರ ಬಲಿದಾನದ ನೆನಪಿಗಾಗಿ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವುದು ಒಳ್ಳೆಯ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.‌

ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಬನ್ನೂರು ಮಹೇಂದ್ರಸಿಂಗ್ ಕಾಳಪ್ಪ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಬಲಿದಾನ ನಮ್ಮ ಇತಿಹಾಸದಲ್ಲೇ ಕಣ್ಣೀರು ಭರಿಸುವಂಥ ದಿನ ಎಂದರು.

ಈ ಮೂವರು ಯೌವ್ವನಾವಸ್ಥೆಯಲ್ಲೇ ತಮ್ಮ ಬದುಕನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟರು, ಅವರ ವ್ಯಕ್ತಿತ್ವದ ಘನತೆಯನ್ನು ಹಂಚಿಕೊಂಡರು .ಜಾಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಬ್ರೀಟಿಷರ ವಿರುದ್ಧ ಹೋರಾಟ ಮಾಡುತ್ತೇನೆ ಎಂದು 12ವರ್ಷದ ಯುವಕನೊಬ್ಬ ಬಾಟಲಿನಲ್ಲಿ ರಕ್ತವನ್ನು ತಂದು ಸ್ವತಂತ್ರ ಕೊಡಿಸುತ್ತೇನೆ ಎಂದು ಶಪಥಮಾಡಿದ್ದನ್ನು ಸ್ಮರಿಸಬಹುದು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಮುತ್ತಣ್ಣ ,
ಗೋಭಕ್ತ ಸಂಘಟನೆ ಟ್ರಸ್ಟ್ ಅಧ್ಯಕ್ಷ
ದೇವೇಂದ್ರ ಪರಿಹಾರಿಯ ,
ಯೋಜನಾ ನಿರ್ದೇಶಕರಾದ ಆನಂದ್, ಡಾ॥ರಾಧಾ ,ಡಾ॥ ಮಮತಾ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಮುತ್ತಣ್ಣ ,ಸುಮಾ, ತಮ್ಮನ್ನಾ, ಪ್ರೇರಣಾ ,ಮುಸ್ಕಾನ್ ,
ಕಾರ್ಯದರ್ಶಿ ವಿಕಾಸ್ ರಾಥೋರ್ ,
ಮಹೇಂದ್ರ್ ಚೋಯಲ್ ,
ಜೆಸಿಐ ಮೈಸೂರು ರಾಯಲ್ ಸಿಟಿ
ಅಧ್ಯಕ್ಷ:- ಸ್ಮಿತಾ ಪಗಾರಿಯ ,
ಯೋಜನೆ ನಿರ್ದೇಶಕರು
ಮುಕೇಶ್ ವೇದಮೂತಾ,
ಕಾರ್ಯದರ್ಶಿ
ಭಾವಿಕ್ ಶಾಹ್,
ಅನಂತ್ ಜೈನ್,ಚೇತನ್ ಕಾಂತರಾಜು, ಹಾಗೂ ಇನ್ನಿತರರು ಹಾಜರಿದ್ದರು

Share This Article
Leave a comment