ಹುಬ್ಬಳ್ಳಿಯ ನರರೋಗ ತಜ್ಞ ವೈದ್ಯ ಡಾ ಕಾಂತ್ರಿ ಕಿರಣ್ ಹಾಗೂ ಪತ್ನಿ ಡಾ. ಶೋಭಾ ನಡುವೆ ವೈಮನಸ್ಸು ಈಗ ಬೀದಿ ರಂಪ ಆಗಿ ಪೋಲಿಸ್ ಠಾಣೆಯ ಮೆಟ್ಟಿಲೇರಿದೆ.ಕ್ರಾಂತಿ ಕಿರಣ್ ಪತ್ನಿ ಹಾಗೂ ಅಸ್ಪತ್ರೆಯ ನಿರ್ದೇಶಕಿ ಯಾಗಿರೋ ಡಾ.ಶೋಭಾ ಪತಿ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಪತಿಯಿಂದ ಜೀವ ಬೆದರಿಕೆ ಇದ್ದು, ಹಲ್ಲೆ ಮಾಡಿದ್ದಾರೆ ಅಂತಾ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.ಹಾಗೇ ಚೀಟಿಂಗ್ ಕೇಸ್ ಕೂಡ ದಾಖಲಿಸಿದ್ದಾರೆ.
ಮತ್ತೊಂದೆಡೆ ಪತಿ ಕ್ರಾಂತಿಕಿರಣ್ ಆಸ್ಪತ್ರೆ ಬೋಡ್೯ ಮೀಟಿಂಗ್ ನಡೆಸದೇ ಬ್ಯಾಂಕ್ ಅಕೌಂಟ್ ಚೇಂಜ್ ಮಾಡಿಸಲು ಹುನ್ನಾರ ನಡೆಸಿದ್ದಾರೆಂದು ಡಾ.ಶೋಭಾ ತಮ್ಮ ಈ ದೂರಿನಲ್ಲಿ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಡಾ. ಕ್ರಾಂತಿಕಿರಣ್ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಡಾ. ಶೋಭಾ 17 ಲಕ್ಷ ರೂಪಾಯಿ ಬೇರೆಯವರಿಗೆ ವರ್ಗಾಯಿಸಿದ್ದಾರೆಂದು ದೂರು ನೀಡಿದ್ದಾರೆ. ದಂಪತಿಗಳು ಪರಸ್ಪರ ಹುಬ್ಬಳ್ಳಿಯ ವಿದ್ಯಾನಗರ ಠಾಣೆಗೆ ಕಂಪ್ಲೆಂಟ್ ಕೊಟ್ಟಿದ್ದಾರೆ.
ಘಟನೆ ಏನು?
ಕಳೆದ ವರ್ಷವೇ ಡಾ. ಕ್ರಾಂತಿ ಕಿರಣ್ ಸಂಸಾಸರದಲ್ಲಿ ಬಹುದೊಡ್ಡ ಕ್ರಾಂತಿ ಎದ್ದಿತ್ತು ಅಲ್ಲದೇ ಅಂದೇ ತನ್ನ ಪತ್ನಿಯ ವಿರುದ್ಧ, ಪ್ರಾಣ ಬೆದರಿಕೆ ದೂರು ದಾಖಲಿಸಿದ್ದರು.
ತನ್ನ ಪತ್ನಿಗೆ ಓರ್ವ ಪರಪುರುಷನ ಜೊತೆ ಅನೈತಿಕ ಸಂಬಂಧವಿದೆ. ಅದನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಹಾಗೂ ಪ್ರಿಯಕರ ಪ್ರಾಣ ಬೆದರಿಕೆಯನ್ನು ಹಾಕುತ್ತಿದ್ದಾರೆಂದು ಇದೇ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಸಿದ್ದರು.
ಅಂದಿನಿಂದ ಇಂದಿನವರೆಗೂ ಇಬ್ಬರ ಮಧ್ಯೆ ಮುನಿಸು ಮಂದುವರೆಯುತ್ತಿದೆ. ತಾನು ಕಟ್ಟಿಸಿದ ಆಸ್ಪತ್ರೆಯಿಂದಲೇ ಆಕೆ ಲಕ್ಷಾಂತರ ರೂಪಾಯಿ ಹಣ ಎಗರಿಸಿದ್ದಲ್ಲದೇ, ನಿತ್ಯವೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪ ಮಾಡಿದ್ದರು.
ಕ್ರಾಂತಿಕಿರಣ್ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ, ಬಿಜೆಪಿಯಲ್ಲಿ ಉನ್ನತ ಸ್ಥಾನ ಹೊಂದಿರುವ ವೈದ್ಯರು ಆಸ್ಪತ್ರೆಯನ್ನ ಕೂಡಾ ನಡೆಸುತ್ತಿದ್ದಾರೆ. ಆದರೆ ಈ ಪ್ರಕರಣದ ಬಗ್ಗೆ ಡಾ. ಕ್ರಾಂತಿಕಿರಣ್ ಪ್ರತಿಕ್ರಿಯೆ ನೀಡಲು ಬಯಸುತ್ತಿಲ್ಲ.
- ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
More Stories
ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !