ಓಮಿಕ್ರಾನ್ ಕುರಿತು ರಾಜ್ಯದಲ್ಲಿಯೂ ಈಗಾಗಲೇ ಹಲವು ಮಾರ್ಗಸೂಚಿ ಜಾರಿಯಾಗಿವೆ. ಆದರೂ ಎರಡನೇ ಡೋಸ್ ಲಸಿಕೆ ಪಡೆಯಲು ಜನ ಹಿಂದೇಟು ಹಾಕಿದ್ದಾರೆ. ಹೀಗಾಗಿ ಎಲ್ಲರೂ ಲಸಿಕೆ ಪಡೆಯುವಂತೆ ಮಾಡಲು ಕಠಿಣ ನಿಯಮಗಳನ್ನು ಜಾರಿ ಮಾಡಿ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಲಸಿಕೆ ಪಡೆಯದಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಡಿ. ಸಿಂಗಾಪುರ ಮಾದರಿಯಲ್ಲಿ ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯ ಕೊಡ್ಬೇಡಿ. ಅಷ್ಟೇ ಅಲ್ಲ, ಲಸಿಕೆ ಪಡೆಯದವರ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಸಹ ಹಾಕದಿರುವ ರೀತಿಯ ಟಫ್ ರೂಲ್ಸ್ ತನ್ನಿ. ಆಗ ಮಾತ್ರ ಶೇಕಡಾ 100ರಷ್ಟು ವ್ಯಾಕ್ಸಿನೇಷನ್ ಟಾರ್ಗೆಟ್ ಮುಟ್ಟಲು ಸಾಧ್ಯ ಎಂದು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.
ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಏನು?
ಎಲ್ಲರಿಗೂ ಡಬಲ್ ಡೋಸ್ ಲಸಿಕೆ ಕಡ್ಡಾಯ ಮಾಡಬೇಕು.
ಸರ್ಕಾರಿ ಸೌಲಭ್ಯ ಪಡೆಯಲು ಲಸಿಕೆ ಕಡ್ಡಾಯ ಮಾಡಿ.
ಲಸಿಕೆ ಪಡೆಯದಿದ್ರೆ ಪಡಿತರ, ಅಡುಗೆ ಅನಿಲ ವಿತರಣೆ ಬೇಡ.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ನೀಡಬೇಡಿ/ವೆಚ್ಚ ಭರಿಸಬೇಡಿ.
ನೀರು, ವಿದ್ಯುತ್‍ನಂತಹ ಮೂಲ ಸೌಲಭ್ಯ ಕಡಿತಗೊಳಿಸಿ.
ಬಿಎಂಟಿಸಿ, ಕೆಎಸ್‍ಆರ್ ಟಿಸು ಮೆಟ್ರೋ ಬಳಕೆಗೆ ಲಸಿಕೆ ಕಡ್ಡಾಯ ಮಾಡಿ.
ವೇತನ, ಪಿಂಚಣಿ ಪಡೆಯಲು 2 ಡೋಸ್ ಕಡ್ಡಾಯ ಮಾಡಿ.
ವ್ಯಾಕ್ಸಿನ್ ಪಡೆದಿಲ್ಲ ಅಂದ್ರೆ ಬಂಕ್‍ಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಕಲು ಬಿಡಬೇಡಿ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು