ದಿನೇದಿನೇ ಪೆಟ್ರೋಲ್ ಬೆಲೆ ಹೆಚ್ಚುತ್ತಿದೆ. ಡೀಸೆಲ್ ದರವೂ ಪೈಪೋಟಿ ನೀಡುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ಕೆಲವೆಡೆ ಇನ್ನೇನು ಶತಕ ದಾಟುವ ಅಂಚಿನಲ್ಲಿದೆ.
ಕರ್ನಾಟಕದಲ್ಲಿ ಕೂಡ ಇಂಧನ ದರ ಕಡಿಮೆ ಏನಿಲ್ಲ. ಬೆಲೆ ಏರಿಕೆ ಏಟಿನಿಂದ ತಪ್ಪಿಸಿಕೊಳ್ಳಲು ಜನಸಾಮಾನ್ಯ ವಿವಿಧ ಉಪಾಯಗಳ ಮೊರೆ ಹೋಗಿದ್ದಾನೆ. ಬೈಕ್ನ ಪೆಟ್ರೋಲ್ ಇಂಜಿನ್ ಬದಲಾಗಿ ಬ್ಯಾಟರಿ ಅಳವಡಿಸಿಕೊಂಡಿರುವುದು ಸಾಮಾನ್ಯವಾಗಿದೆ.
ತಮ್ಮ ಪೆಟ್ರೋಲ್ ಇಂಜಿನ್ನ್ನು ತೆಗೆದಿಡುವ ತಂತ್ರಕ್ಕೆ ಮೊರೆ ಹೋಗುವ ಯೋಚನೆ ಮಾಡಿದ್ದಾರೆ. ಬದಲಾಗಿ ಬ್ಯಾಟರಿಗಳನ್ನು ಅಳವಡಿಸಿಕೊಳ್ಳುತ್ತಿ ದ್ದಾರೆ. ಅಂದರೆ, ಈಗ ವಾಹನ ಹೊಂದಿರುವವರು ಪೆಟ್ರೋಲ್ ಹಾಕಿಸಿಕೊಳ್ಳುವ ಬದಲು ಬ್ಯಾಟರಿ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ.
ಖರ್ಚಿನ ಪ್ರಮಾಣ ಕಡಿಮೆ ಮಾಡುವ ಉಪಾಯ ಇದಾಗಿದೆ. ಇದರಿಂದ ಜನರಿಗೆ ಲಾಭವಾಗುತ್ತಿದೆಯೇ? ಇಂಜಿನ್ ಬದಲಾಯಿಸಲು ಎಷ್ಟು ಖರ್ಚಾಗುತ್ತದೆ? ಇತ್ಯಾದಿ ಮಾಹಿತಿ ಇಲ್ಲಿದೆ.
ಬ್ಯಾಟರಿ ಬದಲಾಯಿಸಲು ಖರ್ಚು ಎಷ್ಟು? :
ಪೆಟ್ರೋಲ್ ಇಂಜಿನ್ ಬದಲಿಸಿರುವ ಫೊಟೊಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಪೆಟ್ರೋಲ್ ಇಂಜಿನ್ ಬೈಕ್ನ್ನು ಬ್ಯಾಟರಿ ಬೈಕ್ಗೆ ಬದಲಿಸಿಕೊಳ್ಳುತ್ತಿ ರುವುದನ್ನು ಹೇಳುತ್ತಿದ್ದಾರೆ.
ಹೀಗೆ ಮಾಡಲು ಸುಮಾರು 10 ಸಾವಿರ ರು ಖರ್ಚಾಗುತ್ತಿದೆ ಎಂದು ಹೇಳಲಾಗು ತ್ತಿದೆ. ಬ್ಯಾಟರಿಗೆ ಅನುಗುಣವಾಗಿ ಖರ್ಚಿನ ಪ್ರಮಾಣ ಹೆಚ್ಚು ಕಡಿಮೆ ಆಗಬಹುದು ಎಂದೂ ಹೇಳುತ್ತಾರೆ.
ಬ್ಯಾಟರಿ ಹಾಕಿಸಿಕೊಂಡ ಬೈಕ್ಗಳು ಪೆಟ್ರೋಲ್ ಬೈಕ್ನಷ್ಟೇ ವೇಗವಾಗಿ ಓಡಿಸಬಹುದೇ ಎಂಬ ಪ್ರಶ್ನೆಯೂ ಬೈಕ್ ಸವಾರರನ್ನು ಕಾಡುತ್ತದೆ.
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More
This website uses cookies.
Leave a Comment