December 23, 2024

Newsnap Kannada

The World at your finger tips!

GRAPES

ದ್ರಾಕ್ಷಿ ಎಷ್ಟು ಹುಳಿ ? ಎಷ್ಟು ಸಿಹಿ ?

Spread the love

ದ್ರಾಕ್ಷಿ (Grapes) ಯನ್ನು “ಹಣ್ಣುಗಳ ರಾಣಿ” ಎಂದು ಕರೆಯುತ್ತಾರೆ, ದ್ರಾಕ್ಷಿಹಣ್ಣು ಬೇಸಿಗೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹಣ್ಣುಗಳಲ್ಲಿ ಪ್ರಮುಖವಾದ ಹಣ್ಣಾಗಿದೆ.

ರೋಗನಿರೋಧಕ ಶಕ್ತಿ ಹೆಚ್ಚಾಗಬೇಕೆಂದರೆ ಅತಿ ಹೆಚ್ಚು ವಿಟಮಿನ್ ಸಿ ಅಂಶವನ್ನು ಒಳಗೊಂಡ ಹಣ್ಣುಗಳು, ಹಾಗೂ ಆಹಾರಗಳನ್ನು ಸೇವನೆ ಮಾಡಬೇಕು. ಅದರಲ್ಲೂ ಈ ದ್ರಾಕ್ಷಿ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ದ್ರಾಕ್ಷಿ ಹಣ್ಣನ್ನು ನಿಯಮಿತವಾಗಿ ಸೇವಿಸದರೆ ಒಳ್ಳೆಯದು.

ಋತುಮಾನಕ್ಕೆ ಅನುಗುಣವಾಗಿ ಸಿಗುವ ಹಸಿರು ದ್ರಾಕ್ಷಿ, ಕಪ್ಪು ದ್ರಾಕ್ಷಿ, ಕೆಂಪು ದ್ರಾಕ್ಷಿ ಈ ಅದ್ಭುತ ಮತ್ತು ಸ್ವಾದಿಷ್ಟವಾದ ಹಣ್ಣುಗಳ ಜೊತೆ ಬೀಜರಹಿತ ದ್ರಾಕ್ಷಿಗಳು ಬರುತ್ತಿವೆ. ದ್ರಾಕ್ಷಿಯು ಜೆಲ್ಲಿ, ದ್ರಾಕ್ಷಿ ಜ್ಯಾಮ್, ದ್ರಾಕ್ಷಿ ರಸ ಒಣದ್ರಾಕ್ಷಿ ಮತ್ತು ವೈನ್ ಗಳ ರೂಪದಲ್ಲಿ ಸಿಗುತ್ತದೆ.

ಒಣದ್ರಾಕ್ಷಿಯನ್ನು ಪಾಯಸ, ಖೀರ್,ಬೂಂದಿ, ಗೊಜ್ಜು ,ಹೀಗೆ ವಿವಿಧ ಅಡುಗೆಗಳಲ್ಲಿ ಬಳಸುತ್ತಾರೆ.

ದ್ರಾಕ್ಷಿಯಲ್ಲಿ ಶೇ.80ರಷ್ಟು ನೀರಿದ್ದರೆ, ಒಣದ್ರಾಕ್ಷಿಯಲ್ಲಿ ಕೇವಲ ಶೇ.15ರಷ್ಟು ಮಾತ್ರ ಇರುತ್ತದೆ. ದ್ರಾಕ್ಷಿಗೆ ಹೋಲಿಸಿದರೆ ಒಣದ್ರಾಕ್ಷಿಯಲ್ಲಿ ಮೂರು ಪಟ್ಟು ಆ್ಯಂಟಿಆಕ್ಸಿಡೆಂಟ್ ಗುಣವಿದೆ.

ಪ್ರತಿಯೊಂದು ಹಣ್ಣೂ ಕೂಡ ತನ್ನದೇ ಆದ ಪೋಷಕಾಂಶಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಒಂದಲ್ಲಾ ಒಂದು ರೀತಿಯಿಂದ ಉಪಯುಕ್ತವಾಗಿರುತ್ತವೆ. ದ್ರಾಕ್ಷಿಹಣ್ಣಿನ ಕಾಲ ಆರಂಭವಾಗಿದೆ. ಬಗೆಬಗೆ ದ್ರಾಕ್ಷಿ ಬಾಯಲ್ಲಿ ನೀರೂರಿಸುವಂತಿವೆ.ಸ್ವಲ್ಪ ಹುಳಿ ಹಾಗೂ ಸಿಹಿ ಅನುಭವ ನೀಡುವ ಈ ಹಣ್ಣಿನ ಪ್ರಯೋಜನಗಳು.

ದ್ರಾಕ್ಷಿ ಪ್ರಯೋಜನಗಳ ಬಗ್ಗೆ ಮಾಹಿತಿ:

ದ್ರಾಕ್ಷಿ ಹಣ್ಣು ದೇಹಕ್ಕೆ ತಂಪು. ಇದನ್ನು ನಿತ್ಯವೂ ಸೇವಿಸಿದರೆ ಹೊಟ್ಟೆ ಉರಿ, ಕಣ್ಣು ಉರಿ ಕಡಿಮೆ ಆಗುತ್ತದೆ.

ಇದರಲ್ಲಿರುವ ಕಬ್ಬಿಣದ ಅಂಶವು ಚರ್ಮಕ್ಕೆ ಅಗತ್ಯ ಇರುವಷ್ಟು ರಕ್ತವನ್ನು ಶುದ್ಧೀಕರಿಸುತ್ತದೆ.

ಕಣ್ಣುಗಳ ಕೆಳಗೆ ಕಪ್ಪು ಕಲೆ ಇದ್ದರೆ ಬೀಜವಿಲ್ಲದ ದ್ರಾಕ್ಷಿಯನ್ನು ಕತ್ತರಿಸಿ ಕಣ್ಣಿನ ಸುತ್ತ ಸವರಿದರೆ ಉತ್ತಮ ಫಲಿತಾಂಶ ದೊರಕುತ್ತದೆ.

ಕಪ್ಪು ದ್ರಾಕ್ಷಿ ಸೇವನೆಯಿಂದ ದೇಹದ ಬೊಜ್ಜು ಕರಗಿಸಿ ಉತ್ತಮ ಆರೋಗ್ಯ ಹೊಂದಲು ಸಾಧ್ಯ.

ದ್ರಾಕ್ಷಿ ರಸದಲ್ಲಿ ಆ್ಯಂಟಿಯಾಕ್ಸಿಡೆಂಟ್‌ ಗುಣವಿದೆ. ಇದು ತ್ವಚೆಯಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಕಾರಿಯಾಗಿದೆ.

ಕಪ್ಪು ದ್ರಾಕ್ಷಿ ಸೇವನೆಯಿಂದ ದೇಹದ ಬೊಜ್ಜು ಕರಗಿಸಿ ಉತ್ತಮ ಆರೋಗ್ಯ ಹೊಂದಲು ಸಾಧ್ಯ.

ನೀರಿನಲ್ಲಿ ಒಣದ್ರಾಕ್ಷಿ ನೆನೆಸಿಟ್ಟು ದಿನಾ ಒಂದೆರಡು ತಿಂದ್ರೆ, ಆರೋಗ್ಯಕ್ಕೆ ಒಳ್ಳೆಯದು.

ಕಪ್ಪು ದ್ರಾಕ್ಷಿಯಲ್ಲಿರುವ ವಿಟಮಿನ್, ಬಿ ಕಾಂಪ್ಲೆಕ್ಸ್, ತಾಮ್ರಾಂಶ, ಕಬ್ಬಿಣಾಂಶ ಮತ್ತು ಸೆಲೆನಿಯಂ ಅಂಶಗಳು ರೋಗನಿರೋಧಕ ಶಕ್ತಿ ಹೆಚ್ಚಿಸಿ ರಕ್ತಕ್ಕೆ ಕಬ್ಬಿಣಾಂಶ ನೀಡಿ ದೇಹಕ್ಕೆ ಯಾವುದೇ ಸೋಂಕು ತಗುಲದಂತೆ ತಡೆಯುತ್ತದೆ.

ಒಣ ದ್ರಾಕ್ಷಿ ಹಣ್ಣುಗಳಲ್ಲಿ ಪೊಟ್ಯಾಶಿಯಂ ಅಂಶದ ಜೊತೆಗೆ ಕ್ಯಾಲ್ಸಿಯಂ ಅಂಶ ಕೂಡ ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು, ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಮೂಳೆಗಳಿಗೆ ಸಂಬಂಧ ಪಟ್ಟ ಯಾವುದೇ ಆರೋಗ್ಯ ಸಮಸ್ಯೆ ಕಾಡದಂತೆ ನೋಡಿಕೊಳ್ಳುತ್ತದೆ.

ಮುಖ್ಯವಾಗಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ದ್ರಾಕ್ಷಿ ಹಣ್ಣುಗಳ ಪಾತ್ರ ತುಂಬಾ ದೊಡ್ಡದು.

ಕರ್ನಾಟಕದಲ್ಲಿ ದ್ರಾಕ್ಷಿ ಬೆಳೆಯುವ ಪ್ರದೇಶಗಳು:

1. ಉತ್ತರ ಕರ್ನಾಟಕದ ಕೃಷ್ಣಾ ನದಿ ಕಣಿವೆ ಭಾಗದಲ್ಲಿ ಬರುವ ಬಿಜಾಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು ಈ ಪ್ರದೇಶವನ್ನು ಕೃಷ್ಣಾ ಕಣಿವೆ ಎಂದು ಗುರುತಿಸಲಾಗಿದೆ. ಅವಿಭಜಿತ ಬಿಜಾಪುರ ಜಿಲ್ಲೆಯಲ್ಲಿ ಸುಮಾರು 200 ವರ್ಷಗಳಿಂದ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಇಲ್ಲಿನ ಬಿಸಿಲು ದಿನಗಳು ಮತ್ತು ತಂಪಾದ ರಾತ್ರಿಗಳು ತುಂಬಿದ ವಾತಾವರಣ ದ್ರಾಕ್ಷಿ ಬೆಳೆಗೆ ಅತ್ಯುತ್ತಮ ವಾತಾವರಣವಾಗಿದ್ದು, ಇಲ್ಲಿನ ದ್ರಾಕ್ಷಿ ಹೊರದೇಶಗಳಲ್ಲೂ ರಫ್ತು ಗುಣಮಟ್ಟವನ್ನು ಕಾಯ್ದುಕೊಂಡಿದೆ.

2. ಬೆಂಗಳೂರು ಸುತ್ತ ಮುತ್ತ ನಂದಿ ಬೆಟ್ಟದ ಕಣಿವೆಯಲ್ಲಿ ಬರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳು ದ್ರಾಕ್ಷಿ ಬೆಳೆಗೆ ಹೆಸರುವಾಸಿಯಾಗಿದ್ದು ಈ ಪ್ರದೇಶವನ್ನು ನಂದಿ ಕಣಿವೆ ಎಂದು ಗುರುತಿಸಲಾಗಿದೆ. ಇಲ್ಲಿ ಹೆಚ್ಚಾಗಿ ಬೆಳೆಯುವ ’ಬೆಂಗಳೂರು ಬ್ಲ್ಯೂ’ ಎಂಬ ತಳಿ ಜಾಗತೀಕವಾಗಿ ಮನ್ನಣೆ ಪಡೆದಿದೆ. ಈಗಿನ ದ್ರಾಕ್ಷಾರಸ ’ವೈನ್’ ಮಾರುಕಟ್ಟೆಯಲ್ಲಿ ಹೆಚ್ಚು ಬಳಕೆಯಲ್ಲಿರುವ ದ್ರಾಕ್ಷಿ ಬಗೆ ಇದಾಗಿದೆ.

Copyright © All rights reserved Newsnap | Newsever by AF themes.
error: Content is protected !!