ಬೆಲ್ ಮಾಡಿ ಮನೆಯೊಳಗೆ ನುಗ್ಗಿದ ಆರು ಜನರ ದರೋಡೆಕೋರ ತಂಡವೊಂದು ಮನೆಯ ಸದಸ್ಯರನ್ನು ಕಟ್ಟಿ ಹಾಕಿ, ಚಿನ್ನಾಭರಣ, ನಗದು ದೋಚುವ ಯತ್ನ ವಿಫಲವಾದ ಘಟನೆ ಮೈಸೂರಿನ ಸರಸ್ವತಿ ಪುರಂನಲ್ಲಿ ಕಳೆದ ರಾತ್ರಿ ಜರುಗಿದೆ.
ಸರಸ್ವತಿಪುರಂ ನಿವಾಸಿ ಡಾಕ್ಟರ್ ದತ್ತಾತ್ರೇಯರ ಮನೆಯಲ್ಲಿ ಕಳೆದ ರಾತ್ರಿ 8 ಗಂಟೆಗೆ ಜರುಗಿದೆ. ಸಾರ್ವಜನಿಕರ ಸಹಕಾರದೊಂದಿಗೆ ನಾಲ್ವರು ದರೋಡೆಕೋರರನ್ನು ಬಂಧಿಸಲಾಗಿದೆ. ಇಬ್ಬರು ಪರಾರಿಯಾಗಿದ್ದಾರೆ.
ಸುಮಾರು ರಾತ್ರಿ ೮ ಗಂಟೆ ಸಮಯದಲ್ಲಿ ವೈದ್ಯರ ಮನೆಗೆ ಬಂದ ತಂಡ ಮನೆಯ ಬೆಲ್ ಮಾಡಿದೆ. ಬಾಗಿಲು ತೆರೆದ ತಕ್ಷಣ ಬಲವಂತವಾಗಿ ಮನೆಗೆ ನುಗ್ಗಿದೆ. ನಂತರ ಮನೆಯವರನ್ನು ಕಟ್ಟಿ ಹಾಕಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗುವ ವೇಳೆಗೆ ಸಾರ್ವಜನಿಕರ ನೆರವಿನೊಂದಿಗೆ 4 ಮಂದಿ ದರೋಡೆ ಕೋರರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಲಾಗಿದೆ.
ಸರಸ್ವತಿ ಪುರಂ ಪೋಲಿಸರು ತಪ್ಪಿಸಿಕೊಂಡ ಇಬ್ಬರ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.
ದರೋಡೆ ಮಾಡಿದ್ದ ಎಲ್ಲಾ ಚಿನ್ನಾಭರಣ, ನಗದು ಸಿಕ್ಕಿವೆ. ಆದರೆ ಅಜ್ಜಿಯೊಬ್ಬರ ಸರ, ಬಳೆ ಹಾಗೂ ಐ ಫೋನ್ ಗಳನ್ನು ಕಿತ್ತು ಕೊಂಡು ಪರಾರಿಯಾಗಿದ್ದಾರೆ.
- ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
- MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
- ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ