December 23, 2024

Newsnap Kannada

The World at your finger tips!

kudure

ಕೋವಿಡ್​ ಕಂಟಕದಿಂದ ಪಾರಾಗಲು ಬಿಟ್ಟಿದ್ದ ಕುದುರೆ ಸಾವು: ಮೆರವಣಿಗೆ ನಡೆಸಿದ ಸಾವಿರಾರು ಜನ‌

Spread the love

ಗ್ರಾಮಕ್ಕೆ ವಕ್ಕರಿಸಿರುವ ಕೊರೋನಾ ಮಹಾಮಾರಿಯನ್ನು ಕಟ್ಟಿಹಾಕಲು ಗ್ರಾಮದಲ್ಲಿ ಬಿಟ್ಟಿದ್ದ ಮರಡಿಮಠದ ಶೌರ್ಯ ಕುದುರೆ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.

ಶೌರ್ಯ ಕುದುರೆ ಏಕಾಏಕಿ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮಠದ ದೇವರ ಕುದುರೆ ಸಾವನ್ನಪ್ಪಿದ ಕಾರಣ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಲು ಮುಂದಾಗಿದ್ದ ಗ್ರಾಮಸ್ಥರು, ಸಾವಿರಾರರು ಸಂಖ್ಯೆ ಸೇರಿ ಮೆರವಣಿಗೆ ಮಾಡಿದ್ದಾರೆ.

ಮೆರವಣಿಗೆ ವೇಳೆ ಯಾವುದೇ ಸಾಮಾಜಿ ಅಂತರ, ಮಾಸ್ಕ್​ ಇಲ್ಲದೇ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ತಹಶಿಲ್ದಾರ್​ ಹೊಳೆಪ್ಪಗೋಳ , ಗ್ರಾಮಕ್ಕೆ ಭೇಟಿ ನೀಡಿ, ಭಕ್ತರು ಮಠ ಪ್ರವೇಶ ಮಾಡದಂತೆ ಮರಡಿ ಮಠವನ್ನು ಸೀಲ್ ಡೌನ್ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!