ಹುಬ್ಬಳ್ಳಿ: ಜಿಲ್ಲಾ ಹೊರವಲಯದ ಗೋಕುಲ ಗ್ರಾಮದ ಧಾರಾವತಿ ಹನುಮಂತ ದೇವಸ್ಥಾನದ ಬಳಿ ಇರುವ ಬೈಪಾಸ್‌ನಲ್ಲಿ, ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ಗುರುತಿಸಲಾಗದಷ್ಟು ಛಿದ್ರಗೊಂಡಿದ್ದಾರೆ, ಮತ್ತು ಪೊಲೀಸರು ಅವರ ವಿವರಗಳನ್ನು ಸಂಗ್ರಹಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಈ ಅವಘಡ ಸಂಭವಿಸಿದೆ. ಅಪಘಾತದ ಸ್ಥಳಕ್ಕೆ ಉತ್ತರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನು ಓದಿ –ರೈಲ್ವೇ ಇಲಾಖೆಯಲ್ಲಿ 3445 ‘ಕ್ಲರ್ಕ್’ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ.20 ಕೊನೆಯ ದಿನ
ಪ್ರತಿ ದಿನ ಮೃತ್ಯುಮಾರ್ಗವಾಗುತ್ತಿರುವ ಹೆದ್ದಾರಿ-1400 ನ ಹಗಲೀಕರಣದ ಅಗತ್ಯವನ್ನು ಸವಾರರು ತೀವ್ರವಾಗಿ ಒತ್ತಿ ಹೇಳುತ್ತಿದ್ದಾರೆ. ಕೆಲಸಕ್ಕೆ ಚಾಲನೆ ಸಿಕ್ಕಿ ಮೂರು ವರ್ಷಗಳಾದರೂ, ಕಾಮಗಾರಿ ಮುಗಿಯದ ಕಾರಣ ಅಪಘಾತಗಳು ತೀವ್ರವಾಗಿ ನಡೆಯುತ್ತಿವೆ.
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ