ಬಂಧಿತರು: ವೇಣುಗೋಪಾಲ್ ಹಾಗೂ ಅರವಿಂದ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಇಬ್ಬರು ಯಲಹಂಕದ ಸುಪ್ರೀಂ ಲೇಔಟ್‌ನಲ್ಲಿ ಕಚೇರಿ ತೆರೆಯಲು ಮುಂದೆ ಬಿದ್ದಿದ್ದರು. ಅಲ್ಲದೇ, ಆ ಕಚೇರಿಯನ್ನು ‘ರಾ’ ಕಚೇರಿಯಂತೆ ದರ್ಶಿಸುವ ರೀತಿಯಲ್ಲಿ ಮಾದರಿ ನಿರ್ಮಾಣ ಮಾಡಿದ್ದರು. ನಕಲಿ ಐಡಿ ಕಾರ್ಡ್ ಪ್ರಿಂಟರ್, ಕಲರ್ ಪ್ರಿಂಟರ್ ಹಾಗೂ ನಕಲಿ ನೇಮಕಾತಿ ಪತ್ರಗಳು ಪತ್ತೆಯಾಗಿವೆ.
ಆರೋಪಿತರು 40ಕ್ಕೂ ಹೆಚ್ಚು ಯುವಕರನ್ನು ಟಾರ್ಗೆಟ್ ಮಾಡಿ ವಂಚನೆ ಎಸಗಿದ್ದಾರೆ . ಸರ್ಕಾರಿ ಉದ್ಯೋಗದ ಆಸೆ ಹೊಂದಿದ್ದವರನ್ನು ಮೋಸ ಮಾಡುತ್ತಿದ್ದ ಈ ಆರೋಪಿಗಳು, ಈವರೆಗೆ 90 ಲಕ್ಷಕ್ಕೂ ಅಧಿಕ ಹಣ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಇದನ್ನು ಓದಿ –ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ – ಖಾತೆಗೆ ಜಮೆಯಾಗಲಿದೆ 1 ಲಕ್ಷ ರೂ.
ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದು, ಇನ್ನಷ್ಟು ವ್ಯಕ್ತಿಗಳು ಈ ವಂಚನೆಗೆ ಒಳಗಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು