January 13, 2025

Newsnap Kannada

The World at your finger tips!

vidya hanitrap

ಹನಿಟ್ರ್ಯಾಪ್ ಆರೋಪ : ಕಾಂಗ್ರೆಸ್​​​​ ನಾಯಕಿ, AICC. ಸದಸ್ಯೆ ವಿದ್ಯಾ ಬಂಧನ

Spread the love

ಕಾಂಗ್ರೆಸ್ ನಾಯಕಿ, AICC ಸದಸ್ಯೆ ವಿದ್ಯಾ ಎಂಬಾಕೆ ಪ್ರಭಾವಿ ರಾಜಕಾರಣಿಗಳು, ಐಪಿಎಸ್​, ಐಎಎಸ್ ಅಧಿಕಾರಿಗಳೂ ಸೇರಿದಂತೆ ಹೈ-ಪ್ರೊಫೈಲ್​ ವ್ಯಕ್ತಿಗಳನ್ನು ಯಾಮಾರಿಸಿ ಹೈಟೆಕ್ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಹಣ ಪೀಕಿದ ಆರೋಪದ ಮೇಲೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

vidya hanitrap1

ತಮಿಳುನಾಡಿನ ವಿದ್ಯಾ, ಹನಿಟ್ರ್ಯಾಪ್ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್​​ ನಾಯಕಿ.

ಈಕೆ ಎಐಸಿಸಿ ಸದಸ್ಯೆ ಜೊತೆಗೆ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಹೌದು.

ಸುಂದರಿ ಆರೋಪಿ ವಿದ್ಯಾ, ತನ್ನ ಸೌಂದರ್ಯದ ಮೂಲಕವೇ ದೆಹಲಿ ನಾಯಕರನ್ನು ಸೆಳೆದು ಹನಿಟ್ರ್ಯಾಪ್ ಮಾಡುತ್ತಿದ್ದಳು ಎನ್ನಲಾಗಿದೆ.

ಐಎಫ್​ಎಸ್, ಐಪಿಎಸ್, ಐಎಎಸ್ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಉದ್ಯಮಿಗಳನ್ನು ಆರಂಭದಲ್ಲಿ ತನ್ನ ಬಣ್ಣದ ಮಾತುಗಳ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಫ್ರೆಂಡ್​ಶಿಪ್​ ಹೆಸರಲ್ಲಿ ಮಾತನಾಡಿಸುತ್ತ ಮೋಸದ ಬಲೆಗೆ ಬೀಳಿಸಿ, ಹಣಕ್ಕೆ ಬೇಡಿಕೆ ಇಡುತ್ತಿದ್ದಳು.

ಹೈಪ್ರೊಫೈಲ್​​ಗಳ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು, ಹನಿ ಟ್ರ್ಯಾಪ್​​ಗೆ ಬೀಳಿಸುತ್ತಿದ್ದಳು. ನಂತರ ನನ್ನ ಬಳಿ ವಿಡಿಯೋ ಇದೆ. ನಿಮ್ಮ ಫೋಟೋ ಇದೆ. ಅಶ್ಲೀಲವಾಗಿ ಮಾತನಾಡಿರುವ ಆಡಿಯೋ ಇದೆ. ಇಂತಿಷ್ಟು ದುಡ್ಡು ಕೊಡಬೇಕು, ಇಲ್ಲದಿದ್ರೆ ನಿಮ್ಮ ಮಾನ ಹರಾಜು ಮಾಡೋದಾಗಿ ಹೆದರಿಸುತ್ತಿದ್ದಳು ಎನ್ನಲಾಗಿದೆ.

ಬೆಂಗಳೂರಿನ ಸಿವಿಲ್ ಕಾಂಟ್ರ್ಯಾಕ್ಟರ್ ಒಬ್ಬರ ಜೊತೆ ಸಲುಗೆ ಬೆಳಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಳಂತೆ. ಇದರಿಂದ ಗಾಬರಿಯಾದ ಆ ಕಾಂಟ್ರ್ಯಾಕ್ಟರ್ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಮೊರೆ ಹೋಗಿದ್ದರು. ಕೇಸ್ ದಾಖಲು ಮಾಡಿಕೊಂಡಿದ್ದ ಪೊಲೀಸರು, ಕೊನೆಗೂ ಆರೋಪಿ ವಿದ್ಯಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Best Convention Hall in Mandya
Copyright © All rights reserved Newsnap | Newsever by AF themes.
error: Content is protected !!