February 22, 2026

Newsnap Kannada

The World at your finger tips!

honey trap

ಹನಿ ಟ್ರ್ಯಾಪ್ : ಖಾಸಗಿ ಸುದ್ದಿ ವಾಹಿನಿ ಮಾಲೀಕ ಸೇರಿ ನಾಲ್ವರ ಬಂಧನ‌

Spread the love

ಉದ್ಯಮಿಯೊಬ್ಬರಿಗೆ ಹನಿ ಟ್ರ್ಯಾಪ್ ಮೂಲಕ 34 ಲಕ್ಷ ರು. ಕಿತ್ತ ನಂತರವೂ ಮತ್ತಷ್ಟು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಿದ್ದ ಖಾಸಗಿ ಸುದ್ದಿ ವಾಹಿನಿ ಮಾಲೀಕ ಸೇರಿ ನಾಲ್ವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಬಂಧಿತರನ್ನು ಖಾಸಗಿ ಸುದ್ದಿ ವಾಹಿನಿಯ ಮಾಲೀಕ ವೀರೇಶ್, ಜಾನ್ ಕೆನಡಿ, ನಿರ್ಮಲ್ ಬಾಬು ಹಾಗೂ ಇನ್ನೋರ್ವ ವ್ಯಕ್ತಿ ಎಂದು ಗುರುತಿಸಲಾಗಿದೆ.

ಆರೋಪಿಗಳು ತಮಿಳುನಾಡು ಮೂಲದ ಉದ್ಯಮಿಯನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ ಕೊಂಡು 34 ಲಕ್ಷ ರುಗಳನ್ನು ವಸೂಲಿ ಮಾಡಿದ್ದರು.

ನಂತರ ಹಣಕ್ಕಾಗಿ ಮತ್ತೆ ಮತ್ತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಇದರಿಂದ ಉದ್ಯಮಿ ನೊಂದುಕೊಂಡು ಪೊಲೀಸರಿಗೆ ದೂರು ನೀಡಿದ್ದರು.

ಅಂತಿಮವಾಗಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

error: Content is protected !!