January 3, 2025

Newsnap Kannada

The World at your finger tips!

share

ಷೇರು ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿ; 50 ಸಾವಿರ ಗಡಿ ದಾಟಿದ ಸೆನ್ಸೆಕ್ಸ್

Spread the love

ಕೊರೊನಾ ಸಾಂಕ್ರಾಮಿಕದ ಕಾರಣ ಭಾರತದ ಆರ್ಥಿಕತೆ ಮೇಲೆ ಹೊಡೆತ ಬಿದ್ದಿತ್ತು. ಇದೀಗ ವ್ಯಾಪಾರೋದ್ಯಮ ಕ್ರಮೇಣವಾಗಿ ಚೇತರಿಕೆ ಕಾಣುತ್ತಿದೆ.

ಈ ನಿಟ್ಟಿನಲ್ಲಿ ಇತಿಹಾಸಲ್ಲೇ ಮೊದಲ ಬಾರಿಗೆ 50 ಸಾವಿರ ಸೆನ್ಸೆಕ್ಸ್ ದಾಖಲೆಯ ಏರಿಕೆ ಕಂಡಿದೆ.

ಇಂದು ಬಿಎಸ್ ಇ ಸೆನ್ಸೆಕ್ಸ್​​​ 50,000 ಗಡಿ ದಾಟುವ ಮೂಲಕ ದಾಖಲೆ ನಿರ್ಮಿಸಿದೆ. ಷೇರು ವಹಿವಾಟು ಆರಂಭವಾಗಿ, ಪ್ರೀ ಓಪನಿಂಗ್ ಸೆಷನ್​​ನಲ್ಲೇ ಸೆನ್ಸೆಕ್ಸ್​ 240 ಪಾಯಿಂಟ್ಸ್​ ಏರಿಕೆ ಕಂಡು 50 ಸಾವಿರದ ಗಡಿ ದಾಟಿದೆ.

ನಿಫ್ಟಿ ಸೂಚ್ಯಂಕ 124 ಪಾಯಿಂಟ್ಸ್​ ಏರಿಕೆ ಕಂಡು 14,700ಕ್ಕಿಂತ ಮೇಲೆ ಜಿಗಿದಿದೆ. ಆರ್​​ಐಎಲ್​, ಇನ್ಫೋಸಿಸ್​ ಹಾಗೂ ಟಿಸಿಎಸ್​ ಕಂಪನಿಗಳು ಲಾಭ ಗಳಿಸಿದ ಟಾಪ್ ಸಂಸ್ಥೆಗಳಾಗಿವೆ.

ಸಂಭ್ರಮ – ಸಂತಸ :

1) 50 ಸಾವಿರದ ಗಡಿ ದಾಟಿದ ಷೇರು ಸೂಚ್ಯಂಕ

2) ಮುಂಬೈ ಷೇರುಮಾರುಕಟ್ಟೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

3) ಬೆಳ್ಳಂಬೆಳಗ್ಗೆ ಷೇರುದಾರರಿಗೆ ಶುಭ ಸುದ್ದಿ

4) ಏರುಗತಿಯಲ್ಲಿ ವೇಗವಾಗಿ ವೃದ್ಧಿಕಂಡ ಸೆನ್ಸೆಕ್ಸ್​​ ಸೂಚ್ಯಂಕ

5) 304.45 ಅಂಕಗಳ ಏರಿಕೆಯೊಂದಿಗೆ ಅರ್ಧಶತಕದ ಗಡಿ ದಾಟಿದ ಸೂಚ್ಯಂಕ

6) ಮೊದಲ ಲಾಕ್​​ಡೌನ್​ ವೇಳೆ ಅರ್ಧಕ್ಕೆ ಅರ್ಧ ಕುಸಿದಿದ್ದ ಸೂಚ್ಯಂಕ

7) ಇತಿಹಾಸದಲ್ಲೇ ಮೊದಲ ಬಾರಿ 50 ಸಾವಿರದ ಗಡಿ ದಾಟಿದ ಸೂಚ್ಯಂಕ

Copyright © All rights reserved Newsnap | Newsever by AF themes.
error: Content is protected !!