January 11, 2025

Newsnap Kannada

The World at your finger tips!

train

ಚೆನ್ನೈ – ಮೈಸೂರು ನಡುವೆ ಹೈಸ್ಪೀಡ್ ರೈಲು:ನಿಲುಗಡೆಗೆ 9 ನಿಲ್ದಾಣ ಗುರುತು

Spread the love

ಚೆನ್ನೈ- ಮೈಸೂರು ನಡುವೆ ಸಂಚಾರ ಮಾಡಲಿರುವ ಹೈ ಸ್ಪೀಡ್ ರೈಲು ನಿಲುಗಡೆ ಮಾಡಲು ರೈಲ್ವೆ ಇಲಾಖೆ ಯೋಜನೆ ರೂಪಿಸಿ, ನಿಲುಗಡೆಗೆ 9 ನಿಲ್ದಾಣಗಳನ್ನು ಗುರುತಿಸಿದೆ.

ತಮಿಳುನಾಡಿನ ಚೆನ್ನೈ, ಪೊನ್ನಮಲ್ಲೈ, ಅರಕೋಣಂ, ಆಂದ್ರದ ಚಿತ್ತೂರು. ಕರ್ನಾಟಕದ ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣ, ಮಂಡ್ಯ, ಮೈಸೂರು ರೈಲು ನಿಲ್ದಾಣಗಳಲ್ಲಿ ಹೈ ಸ್ಪೀಡ್ ರೈಲು ನಿಲುಗಡೆ ಮಾಡುವ ನಿರ್ಧಾರ ಕ್ಕೆ ಬರಲಾಗಿದೆ .

435 ಕಿಮಿ ದೂರದ ಚೆನ್ನೈ- ಬೆಂಗಳೂರು- ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಸುಮಾರು ಒಂದೂವರೆ ಗಂಟೆಗಳನ್ನು ಈ ಹೈ ಸ್ಪೀಡ್ ರೈಲು ಕಡಿಮೆ ಮಾಡಲಿದೆ.

ರೈಲು ಹಳಿಗಳ ಸಮೀಕ್ಷೆ ಕಾರ್ಯವು ಇನ್ನು ಕೆಲವು ತಿಂಗಳಲ್ಲಿ ಪೂರ್ಣಗೊಂಡ ನಂತರವೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೈ ಸ್ಪೀಡ್ ರೈಲಿನಲ್ಲಿ 750 ಪ್ರಯಾಣಿಕರಿಗೆ ಪ್ರಯಾಣ ಮಾಡಲು ಅವಕಾಶವಿದೆ. ಗಂಟೆಗೆ 320 ರಿಂದ 350 ಕಿಮೀ ದೂರ ರೈಲು ಕ್ರಮಿಸಲಿದೆ.

Copyright © All rights reserved Newsnap | Newsever by AF themes.
error: Content is protected !!