January 12, 2025

Newsnap Kannada

The World at your finger tips!

ragini and sanjjanaa

ಜಾಮೀನು ತೀರ್ಪು ಕಾಯ್ದಿರಿಸಿದ ಹೈಕೋರ್ಟ್: ಡ್ರಗ್ಗಿಣಿಯರಿಗೆ ಜೈಲಲ್ಲೇ ದಸರಾ

Spread the love

ಡ್ರಗ್ಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನ ದಲ್ಲಿರುವ ನಟಿಯರಾದ ರಾಗಿಣಿ, ಸಂಜನಾ ಸೇರಿದಂತೆ ಇತರ 7 ಮಂದಿ ಜಾಮೀನು ಅರ್ಜಿ ತೀರ್ಪನ್ನು ನವೆಂಬರ್ ಮೊದಲವ ವಾರದ ತನಕ ಹೈಕೋರ್ಟ್ ಕಾಯ್ದಿರಿಸಿದೆ

ನ್ಯಾಯಾಲಯದ ಈ ನಿರ್ಧಾರದಿಂದಾಗಿ ರಾಗಿಣಿ, ಸಂಜನಾ ಜೈಲಿನಲ್ಲೇ ದಸರಾ ಆಚರಿಸಬೇಕಾಗಿದೆ.

ಹೈಕೋರ್ಟ್ ನ ಏಕ ಸದಸ್ಯ ಪೀಠದ ನ್ಯಾಯಾಧೀಶರು ಸಿಸಿಬಿ ಹಾಗೂ ಆರೋಪಿ ಪರ ವಕೀಲ ಜಯಕುಮಾರ್ ಅವರ ವಾದಗಳನ್ನು ಆಲಿಸಿದೆ.

ಸಿಸಿಬಿ ಪೋಲೀಸರ ವಕೀಲರು ನಟಿಯರೂ ಸೇರಿದಂತೆ ಯಾರಿಗೂ ಜಾಮೀನು ಮಂಜೂರು ಮಾಡದಂತೆ ಮನವಿ ಮಾಡಿದರು.

ಈ ವಾದವನ್ನು ತಳ್ಳಿ ಹಾಕಿ ವಕೀಲ ಜಯಕುಮಾರ್ ಅವರು , ಯಾವುದೇ ಸಾಕ್ಷ್ಯ ಧಾರರ ಇಲ್ಲದೇ ಹೋದರೂ ತಮ್ಮ ಕಕ್ಷಿದಾರರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಎರಡೂ ವಾದಗಳನ್ನು ಆಲಿಸಿದ ನ್ಯಾಯಾಲಯವು ಜಾಮೀನು ಅರ್ಜಿ ಆದೇಶವನ್ನು ನವೆಂಬರ್ ಮೊದಲ ವಾರಕ್ಕೆ ಮುಂದೂಡಿದೆ.

Copyright © All rights reserved Newsnap | Newsever by AF themes.
error: Content is protected !!