March 14, 2025

Newsnap Kannada

The World at your finger tips!

cm , mysore , film city

MUDA ಪ್ರಕರಣ: CBI ತನಿಖೆಗೆ ಹೈಕೋರ್ಟ್‌ ನಿರಾಕರಣೆ, ಸಿಎಂ ಸಿದ್ದರಾಮಯ್ಯ ಅವರಿಗೆ ರಿಲೀಫ್

Spread the love

ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ CBI ತನಿಖೆ ನಡೆಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ದೊರೆತಿದೆ.

ಪ್ರಕರಣವನ್ನು CBIತನಿಖೆಗೆ ವಹಿಸಬೇಕೆಂದು ದೂರುದಾರರಾದ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಧಾರವಾಡ ಹೈಕೋರ್ಟ್ ಈ ಅರ್ಜಿಯನ್ನು ನಿರಾಕರಿಸಿದೆ.

ಇದರಿಂದ ಸಿಎಂ ಸಿದ್ದರಾಮಯ್ಯ ಮತ್ತು ಮುಡಾ ಕೇಸಿನ ಸಂಬಂಧಿತರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ.
ಇದನ್ನು ಓದಿ -RBI ರಿಪೋ ದರ ಶೇ. 6.25ಕ್ಕೆ ಇಳಿಕೆ: ಸಾಲದ ಬಡ್ಡಿದರ ಕುಸಿತದ ನಿರೀಕ್ಷೆ

ಈ ನಿರ್ಧಾರದಿಂದಾಗಿ, ಮುಡಾ ಪ್ರಕರಣದ ತನಿಖೆಯ ಹೊಣೆ ಸ್ಥಳೀಯ ತನಿಖಾ ಸಂಸ್ಥೆಗಳ ಮೇಲೇ ಉಳಿಯಲಿದೆ.

Copyright © All rights reserved Newsnap | Newsever by AF themes.
error: Content is protected !!