November 16, 2024

Newsnap Kannada

The World at your finger tips!

highcourt,congress,lokayukta

shock for Congress: High Court order to cancel ACB - Lokyukta gets power again

ಕಲ್ಲುಕ್ವಾರಿಗಳ ಸರ್ವೆ ಕಾರ್ಯ 1 ತಿಂಗಳಲ್ಲಿ ಅಂತ್ಯಗೊಳಸಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ

Spread the love

ರಾಜ್ಯದ ಎಲ್ಲಾ ಕಲ್ಲುಕ್ವಾರಿಗಳ ಸರ್ವೆ ಕಾರ್ಯ ನಡೆಸಿ, 1 ತಿಂಗಳೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

ಶಿವಮೊಗ್ಗ ಕಲ್ಲುಕ್ವಾರಿಯಲ್ಲಿ ಸ್ಪೋಟಕದ ನಂತರ ತುಮಕೂರಿನಲ್ಲೂ ನಿನ್ನೆ ಜಿಲೆಟಿನ್ ಕಡ್ಡಿ ಸ್ಪೋಟಗೊಂಡಿತ್ತು. ಪ್ರಕರಣವೊಂದರ ಸಂಬಂಧ ಇಂದು ವಿಚಾರಣೆ ಕೈಗೆತ್ತಿಕೊಂಡ ವೇಳೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ಈ ಆದೇಶ ಮಾಡಿದೆ.

ಬುಧವಾರ ಪ್ರಕರಣವೊಂದರ ಕುರಿತಂತೆ ವಿಚಾರಣೆ ಕೈಗೆತ್ತಿಕೊಂಡ ರಾಜ್ಯ ಹೈಕೋರ್ಟ್ ನ ವಿಭಾಗೀಯ ಪೀಠವು, ಕಲ್ಲು ಕ್ವಾರಿಯಿಂದಾಗಿ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂಬುದಾಗಿ ಕಳವಳ ವ್ಯಕ್ತ ಪಡಿಸಿತು.

ಕ್ವಾರಿಗಳಲ್ಲಿ ನಿಯಮ ಪಾಲಿಸಲಾಗುತ್ತಿದೆಯೇ.? ನಿಯಮ ಪಾಲಿಸದ ಕ್ವಾರಿಗಳ ಮೇಲೆ ಕ್ರಮವೇನು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರ ವಕೀಲರು, ಹೈಕೋರ್ಟ್ ವಿಭಾಗೀಯ ಪೀಠಕ್ಕೆ ರಾಜ್ಯದಲ್ಲಿರುವಂತಹ ಕಲ್ಲು ಕ್ವಾರಿಗಳ ಬಗ್ಗೆ ಸರ್ವೇ ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು.

ಈ ನಡುವೆ ರಾಜ್ಯದಲ್ಲಿನ ಕಲ್ಲುಕ್ವಾರಿಗಳ ಬಗ್ಗೆ ಸರ್ವೆ ನಡೆಸಿ, ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿ ಮಾರ್ಚ್ 8ಕ್ಕೆ ವಿಚಾರಣೆಯನ್ನು ಮುಂದೂಡಿತು.

Copyright © All rights reserved Newsnap | Newsever by AF themes.
error: Content is protected !!