ಸಿಎಂಗೆ 25 ಸಾವಿರ ರು ದಂಡ ವಿಧಿಸಿದ ಹೈಕೋರ್ಟ್ : ಲೋಕಾಯುಕ್ತ ತನಿಖೆಗೂ ಅದೇಶ

Team Newsnap
1 Min Read

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಮ್ಮ ವಿರುದ್ದ ಡಿನೋಟಿಫಿಕೇಷನ್ ಆರೋಪ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ, ಲೋಕಾಯುಕ್ತ ಪೊಲೀಸರ ತನಿಖೆಗೆ ಹೈಕೋರ್ಟ್‌ ಸಮ್ಮತಿ‌‌ ಸೂಚಿಸಿದೆ.

ಇದೇ ವೇಳೆ ತಮ್ಮ ವಿರುದ್ದ ಕೇಳಿ ಬಂದಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ದಾಖಲಾಗಿದ್ದ, ಎಫ್‌ಐಆರ್ ಅನ್ನು ಕೂಡ ರಾಜ್ಯ ಹೈಕೋರ್ಟ್‌ ನಿರಾಕರಿಸಿದೆ. ತನಿಖೆಯನ್ನು ಮುಂದುವರೆಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದೆ.

ನ್ಯಾಯಾಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ನ್ಯಾಯಾಪೀಠ ಆದೇಶವನ್ನು ಹೊರಡಿಸಿದ್ದು, ಇದೇ ವೇಳೆ ನ್ಯಾಯಪೀಠ ಅರ್ಜಿದಾರ ಸಿಎಂ ಬಿಎಸ್‌ವೈ ಅವರಿಗೆ 25 ಸಾವಿರ ದಂಡವನ್ನು ಹಾಕಿದೆ ಎನ್ನಲಾಗಿದೆ.

ಆರ್‌.ಟಿ.ನಗರದ ಗಂಗೇನಹಳ್ಳಿ ವ್ಯಾಪ್ತಿಯ ಮಠದಹಳ್ಳಿ ಬಡಾವಣೆ ಪ್ರದೇಶದಲ್ಲಿ 1 ಎಕರೆ 11 ಗುಂಟೆ ಜಮೀನು ಡಿನೋಟಿಫೈ ಮಾಡಲಾಗಿದೆ ಎಂಬ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಹಾಲಿ ಯಡಿಯೂರಪ್ಪ ವಿರುದ್ಧ ಎಫ್ ಐಆರ್‌ ದಾಖಲಿಸಿದ್ದರು.

ಈ ಎಫ್ ಐಆರ್ ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಅರ್ಜಿ ಸಲ್ಲಿದ್ದರು.

Share This Article
Leave a comment