ಖಾಸಗಿ ಆಸ್ಪತ್ರೆಗಳು ಸಂಗ್ರಹಿಸಿದ 1.29 ಕೋಟಿ ಡೋಸ್ ವ್ಯಾಕ್ಸಿನ್ ಪೈಕಿ ಕೇವಲ 22 ಲಕ್ಷ ಡೋಸ್ ಬಳಕೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ದೇಶದಲ್ಲಿ ಉಂಟಾಗಿದ್ದ ಕೊರೊನಾ ವ್ಯಾಕ್ಸಿನ್ ಕೊರತೆ ನಿಧಾನಕ್ಕೆ ಕ್ಷೀಣಿಸುತ್ತಿದೆ. ಈ ಮಧ್ಯೆ ಬೇಸರದ ಸುದ್ದಿ ಏನೆಂದರೆ, ಖಾಸಗಿ ಆಸ್ಪತ್ರೆಗಳು ವ್ಯಾಕ್ಸಿನ್ನ್ನ ಶೇ. 17 ರಷ್ಟು ಮಾತ್ರ ಬಳಕೆ ಮಾಡಿಕೊಂಡಿವೆ ಅನ್ನೋ ಮಾಹಿತಿ ಸರ್ಕಾರದ ಅಂಕಿ ಅಂಶಗಳಿಂದ ಬಯಲಾಗಿದೆ.
ಈ ಮಾಹಿತಿ ಪ್ರಕಾರ ಮೇ ತಿಂಗಳಿನಲ್ಲಿ ದೇಶದಲ್ಲಿ 7.4 ಕೋಟಿ ವ್ಯಾಕ್ಸಿನ್ ಲಭ್ಯವಿದೆ. ಅದರಲ್ಲಿ 1.85 ಕೋಟಿ ವ್ಯಾಕ್ಸಿನ್ ಅನ್ನು ಖಾಸಗಿ ಆಸ್ಪತ್ರೆಗಳಿಗೆ ಮೀಸಲಿಡಲಾಗಿದೆ.
ಅದರಂತೆ ದೇಶದಲ್ಲಿರುವ ವಿವಿಧ ಖಾಸಗಿ ಆಸ್ಪತ್ರೆಗಳು 1.29 ಕೋಟಿ ವ್ಯಾಕ್ಸಿನ್ ಡೋಸ್ ಖರೀದಿ ಮಾಡಿವೆ. ಈ 1.29 ಕೋಟಿ ಡೋಸ್ಗಳಲ್ಲಿ ಕೇವಲ 22 ಲಕ್ಷ ಡೋಸ್ಗಳನ್ನ ಮಾತ್ರ ನೀಡಿವೆ ಎಂದು ಗೊತ್ತಾಗಿದೆ.
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಖಾಸಗಿ ಆಸ್ಪತ್ರೆಗಳಿಗೆ ಬೆಲೆ ನಿಗದಿ ಮಾಡಿದೆ. ಕೋವಿಶೀಲ್ಡ್ ವ್ಯಾಕ್ಸಿನ್ ಒಂದು ಡೋಸ್ಗೆ 780 ರೂಪಾಯಿ ಆಗಿದ್ರೆ, ಸ್ಪುಟ್ನಿಕ್ಗೆ 1,145 ರು ಹಾಗೂ ಕೋವ್ಯಾಕ್ಸಿನ್ಗೆ 1,410 ರು ನಿಗದಿ ಮಾಡಿದೆ. ಇದರಲ್ಲೇ ಖಾಸಗಿ ಆಸ್ಪತ್ರೆಗಳ ಸೇವಾ ಶುಲ್ಕ ಕೂಡ ಒಳಗೊಂಡಿರುತ್ತದೆ.
ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಬೆಲೆ ಹೆಚ್ಚಾಗಿದೆ ಮತ್ತು ವ್ಯಾಕ್ಸಿನ್ ಮೇಲಿರುವ ಅಪನಂಬಿಕೆಯಿಂದಾಗಿ ಜನರು ಅಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕಿರಬಹುದು ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್