December 26, 2024

Newsnap Kannada

The World at your finger tips!

yogi atm

ಎಟಿಎಂ ಹಣ ಕದಿಯಲು ಆಕೆಯ ಸೌಂದರ್ಯ,ಪ್ರೀತಿ -ಪ್ರೇರಣೆ ಬೂಕನಕೆರೆ ಯೋಗೇಶ್

Spread the love

ಆಕೆ ಸುರ ಸುಂದರಿ. ಆಕೆಯ ಮಾತು, ಪ್ರೀತಿ, ಪ್ರೇರಣೆ ಮರುಳಾಗಿ ನಾನು ಈ ಕೃತ್ಯ ಎಸಗಿದೆ. ಚಿನ್ನಾ, ನೀನು ದುಡ್ಡು ಸಂಪಾದನೆ ಮಾಡಿಕೊಂಡು ಬಾ. ನಾವಿಬ್ಬರೂ ಎಲ್ಲಾದರೂ ಹೋಗಿ ರಾಯಲ್ ಲೈಫ್ ಲೀಡ್ ಮಾಡೋಣ !ಎಂದಿದ್ದಳು. ಆದರೆ ಜೈಲು ಸೇರಿದಾಗ ಆಕೆ ನಾಪತ್ತೆ ಯಾಗಿದ್ದಾಳೆ.

ಇದು ಎಟಿಎಂ ಗೆ ತುಂಬ ಬೇಕಿದ್ದ 64 ಲಕ್ಷ ರೂ. ಹಣ ಸಮೇತ ಎಸ್ಕೆಪ್ ಆಗಿ ಸಿಕ್ಕಿಬಿದ್ದ ಮಂಡ್ಯ ಜಿಲ್ಲೆಯ ಬೂಕನಕೆರೆ ಗ್ರಾಮದ ಚಾಲಕ ಯೋಗೀಶ್ ಪೋಲಿಸರ ಮುಂದೆ ಒಪ್ಪಿಕೊಂಡ ರೀತಿ.

ನಾನು ಹಣ ಕದಿಯಲು ಪ್ರೇರಣೆ ನೀಡಿದ್ದು ಅತ್ತೆಯ ಮಗಳು. ಆಕೆಯ ರೂಪಕ್ಕೆ ಮರುಳಾಗಿದ್ದೆ. ಮುಂಬೈ ನಲ್ಲಿ ಇದ್ದವಳು ಗಂಡನನ್ನು ಬಿಟ್ಟು ಬಂದಿದ್ದಳು. ನನ್ನ ಜೊತೆ ಪ್ರೀತಿ ಯ ನಾಟಕ‌ ಮಾಡಿದಳು. ಹೆಂಡತಿ ಮಕ್ಕಳ ನ್ನು ಬಿಟ್ಟು ಈಕೆಗೆ ಜೋತು ಬಿದ್ದು ಬದುಕಿನಲ್ಲಿ ಸಂಕಷ್ಟ ಕ್ಕೆ ಸಿಲುಕಿದೆ ಎಂದು ಯೋಗೀಶ್ ಗೋಳಾಡಿದ್ದಾನೆ.

ನಂಗೆ ತಲೆ ಕೆಟ್ಟಿತ್ತು ಸಾರ್ :

ನಂಗೆ ತಲೆ ಸರಿ ಇರಲಿಲ್ಲ. ಆಕೆ ಹೇಳಿದಳು ಅಂತ ಈ ಕೃತ್ಯ ಮಾಡಿದೆ. ನನ್ನ ಹತ್ತಿರ ಹಣ ಇದ್ದಾಗ ಜೊತೆಯಲ್ಲಿ ಇದ್ದವಳು ಈಗ ಇಲ್ಲ ಎನ್ನುತ್ತಾನೆ ಯೋಗೀಶ್.

ಮಕ್ಕಳೊಂದಿಗೆ ನಂದಿನಿ ಬಡಾವಣೆಯಲ್ಲಿ ವಾಸವಾಗಿದ್ದ ಸೆಕ್ಯೂರ್ ವಾಲ್ಯೂ ಕಂಪನಿ ಚಾಲಕ ಯೋಗೀಶ್ ಈಗ ಜೈಲು ಸೇರಿದ್ದಾನೆ. ಹೆಂಡತಿ ಗಂಡ ನನ್ನು ಬಿಡಿಸುವ ಪ್ರಯತ್ನ ದಲ್ಲಿ ಇದ್ದಾಳೆ.

ಆದರೆ ಹಣಕ್ಕಾಗಿ ಪ್ರಿಯಕರನನ್ನು ಜೈಲು ಸೇರುವಂತೆ ಮಾಡಿರುವ ಅತ್ತೆ ಮಗಳು ಮಾತ್ರ ನಾಪತ್ತೆ ಯಾಗಿದ್ದಾಳೆ. ಎಟಿಎಂ ಹಣ ಕದಿಯಲು ಪ್ರೇರಣೆ ನೀಡಿದ ಆಕೆಯ ವಿರುದ್ದವೂ ಪೋಲಿಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.

Copyright © All rights reserved Newsnap | Newsever by AF themes.
error: Content is protected !!