ಮಂಡ್ಯ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಎನ್ ಡಿ ಎ ಮೈತ್ರಿ ಕೂಟಯಶಸ್ವಿ

Team Newsnap
2 Min Read

ಮಂಡ್ಯ : ಜಾತ್ಯತೀತ ಜನತಾದಳ – ಬಿಜೆಪಿ ಮೈತ್ರಿಕೂಟ ಮಂಡ್ಯ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಪ್ರಾಬಲ್ಯ ಸಾಧಿಸಿವೆ.

ನಗರಸಭೆಯಲ್ಲಿ ಮೊದಲ ಅವಧಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಜೆಡಿಎಸ್ ಎರಡನೇ ಅವಧಿಯಲ್ಲಿಯೂ ಮಿತ್ರ ಪಕ್ಷ ಬಿಜೆಪಿ ಬೆಂಬಲದಿಂದ ಅಧಿಕಾರದ ಗದ್ದುಗೆ ಅಲಂಕರಿಸಿದೆ

ನಗರಸಭೆಯ ಅಧ್ಯಕ್ಷರಾಗಿ ಜೆಡಿಎಸ್ ನ ನಾಗೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಎಂ ಸಿ ಅರುಣ್ ಕುಮಾರ್ ಆಯ್ಕೆಯಾದರು. ಇದರಿಂದ ಕಾಂಗ್ರೆಸ್ ಮುಖಭಂಗವಾಗಿದೆ.

ಈ ಮೊದಲು ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ನಡೆಸಿದ ಪ್ರಯತ್ನ ವಿಫಲವಾಗಿದೆ.

ಸಾಮಾನ್ಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜಾತ್ಯತೀತ ಜನತಾದಳದಿಂದ ಸದಸ್ಯ ನಾಗೇಶ್, ಕಾಂಗ್ರೆಸ್ ಪಕ್ಷದಿಂದ ಎಚ್ಎಸ್ ಮಂಜು ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದರು, ಬಿಸಿಎಂ ಎ ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಸದಸ್ಯ ಎಂ ಸಿ ಅರುಣ್ ಕುಮಾರ್ ಕಾಂಗ್ರೆಸ್ ಪಕ್ಷದಿಂದ ಜಾಕೀರ್ ಪಾಷಾ ಮತ್ತು ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದರು.

ಲೆಕ್ಕಾಚಾರ ಏನು ?

ಅಧ್ಯಕ್ಷ ಸ್ಥಾನಕ್ಕೆ ನಾಗೇಶ್ ಮತ್ತು ಎಚ್.ಎಸ್ ಮಂಜು ನಡುವೆ ಸ್ಪರ್ಧೆ ಏರ್ಪಟ್ಟು ನಾಗೇಶ್ – 19 ಮತ ಪಡೆದು ಅಧ್ಯಕ್ಷ ಗದ್ದುಗೆ ಅಲಂಕರಿಸಿದರೆ ಎಚ್ಎಸ್ ಮಂಜು – 18 ಮತ ಮತ ಪಡೆದು ಪರಾಭವ ಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಎಂ ಸಿ ಅರುಣ್ ಕುಮಾರ್ 19 ಮತ ಪಡೆದು ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ನ ಜಾಕಿರ್ ಪಾಷಾ ಪರಾಭವ ಗೊಂಡಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಖುದ್ದಾಗಿ ಮೈತ್ರಿಕೂಟವನ್ನು ಗೆಲುವಿನ ದಡ ಸೇರಿಸಿದ್ದು, ಶಾಸಕ ಗಣಿಗ ರವಿಕುಮಾರ್ ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಗದ್ದುಗೆ ತರಲು ವಿಫಲರಾಗಿದ್ದಾರೆ.

ನಗರಸಭೆಯಲ್ಲಿ 35 ಚುನಾಯಿತ ಸದಸ್ಯರಿದ್ದಾರೆ, ಜೆಡಿಎಸ್ ನ 18 ಸದಸ್ಯರ ಪೈಕಿ ಮೂವರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದರಿಂದ ಸದಸ್ಯರ ಸಂಖ್ಯೆ 15ಕ್ಕೆ ಕುಸಿದಿತ್ತು, ಕಾಂಗ್ರೆಸ್ ಹತ್ತು ಸದಸ್ಯರನ್ನು ಹೊಂದಿದ್ದು ಈ ಪೈಕಿ ಟಿ.ಕೆ ರಾಮಲಿಂಗಯ್ಯ ಜೆಡಿಎಸ್ ನತ್ತ ಮುಖ ಮಾಡಿದ್ದರು ಇದರಿಂದ ಕಾಂಗ್ರೆಸ್ ನ ಬಲ 9ಕ್ಕೆ ಕುಗ್ಗಿತ್ತು, ಐವರು ಪಕ್ಷೇತರರು ಜೊತೆಗೂಡಿ ಜೆಡಿಎಸ್ ನ ಮೂವರು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದರು, ಬಿಜೆಪಿ ಪಕ್ಷದ ಇಬ್ಬರು ಸದಸ್ಯರು ಮಿತ್ರ ಪಕ್ಷ ಜೆಡಿಎಸ್ ಜೊತೆಗೂಡಿದ್ಧರು.ಅಲ್ಪಸಂಖ್ಯಾತ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

ಇದೀಗ ಜೆಡಿಎಸ್ ಪಕ್ಷಕ್ಕೆ ಪಕ್ಷದ 15 ಸದಸ್ಯರು, ಬಿಜೆಪಿ ಇಬ್ಬರು ಸದಸ್ಯರು, ಕಾಂಗ್ರೆಸ್ ಪಕ್ಷದ ಟಿ.ಕೆ ರಾಮಲಿಂಗಯ್ಯ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ ಚಲಾಯಿಸಿದ್ದು ಅಧಿಕಾರದ ಗದ್ದುಗೆ ಹಿಡಿಯಲು ಸಹಕಾರಿಯಾಗಿದೆ.
ಅದೇ ರೀತಿ ಕಾಂಗ್ರೆಸ್ ಪಕ್ಷದ ಪರ ಪಕ್ಷದ 9 ಸದಸ್ಯರು, ಐವರು ಪಕ್ಷೇತರರು, ಜೆಡಿಎಸ್ ನ ಮೂವರು ಹಾಗೂ ಶಾಸಕ ಗಣಿಗ ರವಿ ಕುಮಾರ್ ಮತ ಚಲಾಯಿಸಿದ್ದರೂ ಒಂದು ಮತದಿಂದ ಕಾಂಗ್ರೆಸ್ ಪರಾಭವಗೊಂಡಿದೆ.

Share This Article
Leave a comment