ಮಂಗಳ ಅಂಗಳಕ್ಕೆ ಹೆಲಿಕಾಪ್ಟರ್ ಲ್ಯಾಂಡ್: ನ್ಯಾಸಾ ಹೊಸ ಅಧ್ಯಾಯ

Team Newsnap
1 Min Read

ವಿಶ್ವ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ ವನ್ನು ‌ನ್ಯಾಸ ಸೃಷ್ಟಿ ಮಾಡಿದೆ.‌ ಭೂಮಿಯನ್ನು ಬಿಟ್ಟು ಬೇರೊಂದು ಗ್ರಹದಲ್ಲಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಹಾರಿಸಿ ಅಮೆರಿಕ ಬೆರಗು ಮೂಡಿಸಿದೆ.

ವಿಶ್ವದ ಬಾಹ್ಯಾಕಾಶ ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇದೊಂದು ಮಹತ್ಸಾಧನೆ ಯಾಗಿದೆ. ಇಡೀ ವಿಜ್ಷಾನ ಕ್ಷೇತ್ರವೇ ಬೆರಗಾಗುವಂತಹ ವಿದ್ಯಮಾನಕ್ಕೆ ಇಂದಿನ ಕ್ಷಣಗಳು ಸಾಕ್ಷಿಯಾಗಿವೆ.

ಮಂಗಳ ಮತ್ತು ಚಂದ್ರಗ್ರಹಗಳೇ ಹೆಚ್ಚು ಸುದ್ದಿಯಲ್ಲಿರುತ್ತೆ. ಕಾರಣ ಇವೆರಡೂ ಗ್ರಹಗಳಲ್ಲಿ ನಿರಂತರ ಸಂಶೋಧನೆಗಳು ನಡೆಯುತ್ತಲೇ ಇವೆ.

ಕಳೆದ ತಿಂಗಳು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಮಹತ್ಸಾಧನೆಯನ್ನು ಮಾಡಿತ್ತು. 2020ರ ಜುಲೈ 30ರಂದು ನಾಸಾ ಹಾರಿ ಬಿಟ್ಟಿದ್ದ ರಾಕೆಟ್​ನಲ್ಲಿ ಪರ್ಸಿವರಿಯೆನ್ಸ್ ರೋವರ್ ಇರಿಸಲಾಗಿತ್ತು. ಬರೋಬ್ಬರಿ 203 ದಿನಗಳ ಕಾಲ 47.2 ಕೋಟಿ ಕಿಲೋ ಮೀಟರ್ ಕ್ರಮಿಸಿ ಫೆಬ್ರವರಿ 18 ರಂದು ಪರ್ಸಿವರಿಯೆನ್ಸ್ ರೋವರ್ ಗ್ರಹದ ಮೇಲೆ ಇಳಿದಿತ್ತು.

ಮಂಗಳನ ಅಂಗಳ ತಲುಪಿರುವ ಪರ್ಸಿವರೆನ್ಸ್ ರೋವರ್ ಬಾಹ್ಯಾಕಾಶ ನೌಕೆಯು, ತನ್ನಲ್ಲಿ ಅಳವಡಿಸಿರುವ ಕಂಪ್ಯೂಟರ್ ರೋಬೋ ಮೂಲಕ ಅಲ್ಲಿಯ ಕೆಲಚಿತ್ರಗಳನ್ನು ಈಗಾಗಲೇ ಭೂಮಿಗೆ ಕಳುಹಿಸಿದೆ. ರೋವರ್ ನೌಕೆಯಿಂದ 13 ಅಡಿ ದೂರದಲ್ಲಿರುವ ಇಂಜೆನ್ಯುಟಿ ಹೆಲಿಕಾಫ್ಟರ್, ಮಂಗಳನ ಅಂಗಳಕ್ಕೆ ಇಳಿದ 46 ನೇ ದಿನಕ್ಕೆ ಅಂದರೆ ಏಪ್ರಿಲ್ 6 ರಂದು ಕೆಂಪು ಗ್ರಹದ ಮೇಲ್ಮೈಯನ ಅದ್ಭುತ ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು.

ಅಮೆರಿಕದ ಬಾಹ್ಯಕಾಶ ಸಂಸ್ಥೆಯು ಮತ್ತೊಂದು ಮಹಾ ಸವಾಲನ್ನು ಗೆದ್ದಿದೆ. ಅನ್ಯ ಗ್ರಹದಲ್ಲೂ ಮಾನವ ಮುಂದೊಂಮ್ಮೆ ವಾಸ ಮಾಡಬಹುದಾ? ಎಂಬುವುದರ ಅನ್ವೇಷಣೆಯಲ್ಲಿ ತೊಡಗಿದೆ.

Share This Article
Leave a comment