ಇಂಡೋನೇಷ್ಯಾದಲ್ಲಿ ಭಾರೀ ಮಳೆ, ಪ್ರವಾಹ- 126ಕ್ಕೂ ಹೆಚ್ಚು ಜನರ ದುರಂತ ಸಾವು

Team Newsnap
1 Min Read

ಆಸ್ಟ್ರೇಲಿಯಾದ ನಂತರ ಇದೀಗ ಇಂಡೋನೇಷ್ಯಾದಲ್ಲಿ ಭಾರೀ ಮಳೆ, ಪ್ರವಾಹದಿಂದಾಗಿ 126ಕ್ಕೂ ಹೆಚ್ಚು ಮಂದಿ ದುರಂತ ಸಾವು ಕಂಡಿದ್ದಾರೆ.

ಪೂರ್ವ ಇಂಡೊನೇಷ್ಯಾದಲ್ಲಿ ಸಂಭವಿಸಿದ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಮೃತರ ಸಂಖ್ಯೆ 126ಕ್ಕೆ ಏರಿದೆ. ಇನ್ನೂ ಹಲವಾರು ಜನರು ನಾಪತ್ತೆಯಾಗಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಮಳೆ ಬೀಳುತ್ತಿದೆ ಪರಿಹಾರ ಕಾರ್ಯ ಹಾಗೂ ನಾಪತ್ತೆಯಾಗಿರುವವರನ್ನು ಹುಡುಕುವುದಕ್ಕೆ ತೀವ್ರ ಅಡಚಣೆ ಉಂಟಾಗಿದೆ. 

ಪ್ರವಾಹದಿಂದಾಗಿ ಇಂಡೊನೇಷ್ಯಾದ ಫ್ಲೋರ್ಸ್‌ ದ್ವೀಪದಿಂದ ಪೂರ್ವ ಟಿಮೋರ್‌ವರೆಗೆ ವ್ಯಾಪಿಸಿರುವ ದ್ವೀಪಗಳಲ್ಲಿ ತೀವ್ರ ಹಾನಿಯಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.

ಈಗ ಸಂಭವಿಸಿರುವ ಅನಾಹುತವನ್ನು ನ್ಯಾಷನಲ್ ಡಿಸಾಸ್ಟರ್ ಅಂತ ಘೋಷಣೆ ಮಾಡಿದೆ. ಇಂಡೋನೇಷ್ಯಾದ ಸಾವಿರಾರು ಜನರು ಮಳೆ-ಪ್ರವಾಹ ಮತ್ತು ಭೂಕುಸಿತದಿಂದ ಈ ಬಾರಿ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಕೃತಿ ತನ್ನ ಮುನಿಸನ್ನು ಪದೇ ಪದೇ ತೋರಿಸುತ್ತಲೇ ಇದೆ. ಮಳೆ-ಪ್ರವಾಹದಿಂದ ಆದ ಪರಿಸ್ಥಿತಿಯಿಂದ ಇಂಡೋನೇಷ್ಯಾದ ರಾಜಧಾನಿಯೂ ಹೊರತಾಗಿಲ್ಲ.

ರಸ್ತೆಗಳ ಮೇಲೆ ನೀರು ನಿಂತು ಸಾಲು ಸಾಲಾಗಿ ವಾಹನಗಳ ನಿಂತಲ್ಲೆ ನಿಂತಿದೆ. ಇನ್ನು ಕೆಲವು ಕಡೆ ನಡು ರಸ್ತೆಯಲ್ಲಿ ಬರುತ್ತಿರುವ ದ್ವಿಚಕ್ರ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

Share This Article
Leave a comment