February 22, 2026

Newsnap Kannada

The World at your finger tips!

mantralaya

ಮಳೆಯ ಆರ್ಭಟ ತತ್ತರಿಸಿದ ಮಂತ್ರಾಲಯ : ಮದ್ವೆಗೆ ಬಂದ ಜನ ಫಜೀತಿಗೆ ಸಿಲುಕಿ ತತ್ತರ

Spread the love

ಮಳೆಯ ಅಬ್ಬರ ಜೋರಾಗಿರುವ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಭಾನುವಾರ ಅವಾಂತರ ಸೃಷ್ಟಿಯಾಗಿತ್ತು.

ಮಂತ್ರಾಲಯದ ಮದುವೆ ಮಂಟಪಕ್ಕೆ ಮಳೆ ನೀರು ನುಗ್ಗಿದ್ದರಿಂದ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದ್ದರಿಂದ ಮದುವೆಗೆ ಬಂದಿದ್ದ ಜನರು ಫಜಿತಿಗೆ ಸಿಲುಕಿದ್ದರು.‌

ಮಂತ್ರಾಲಯದಲ್ಲಿನ ಕರ್ನಾಟಕ ಭವನಕ್ಕೂ ಮಳೆ ನೀರು ನುಗ್ಗಿತ್ತು. ರಸ್ತೆ ತುಂಬಾ ನೀರು ನಿಂತಿದ್ದರಿಂದ ವಾಹನ ಸವಾರರೂ ಪರದಾಡಿದರು.‌ ಕೆಲವು ವಾಹನ ಸವಾರರು ನೀರಿನಲ್ಲಿ ಗಾಡಿ ಚಲಾಯಿಸುವ ದುಸ್ಸಾಹಸ ಮಾಡಿರೋದು ಕಂಡುಬಂತು.

error: Content is protected !!