December 24, 2024

Newsnap Kannada

The World at your finger tips!

krs,dam,water

heavy rain in Kodagu: Inflow to KRS begins ಕೊಡಗಿನಲ್ಲಿ ವರುಣನ ಅಬ್ಬರ : ಕೆಆರ್ ಎಸ್ ಗೆ ಒಳ ಹರಿವು ಆರಂಭ

ಕೊಡಗಿನಲ್ಲಿ ವರುಣನ ಅಬ್ಬರ : ಕೆಆರ್ ಎಸ್ ಗೆ ಒಳ ಹರಿವು ಆರಂಭ

Spread the love

ಮಂಡ್ಯ : ಕೊಡಗಿನಲ್ಲಿ ಮಳೆಯ ಅಬ್ಬರ ಆರಂಭವಾಗಿದೆ ಮಂಗಳವಾರ ಮಳೆ ಪ್ರಮಾಣದಲ್ಲಿ ಏರಿಕೆಯಾಗಿದೆ.

ಪ್ರಸಕ್ತ ವರ್ಷದಲ್ಲಿ ಕೆಆರ್‌ಎಸ್‌ ಡ್ಯಾಂಗೆ ಮೊದಲ ಬಾರಿಗೆ ಸಾವಿರ ಕ್ಯೂಸೆಕ್‌ ನೀರು ಬಿಡಲಾಗಿದೆ.

ಜೂನ್ ಮಳೆ‌ ಕೈಕೊಟ್ಟ ಹಿನ್ನೆಲೆ ಡ್ಯಾಂನ ಒಳಹರಿವು ಕುಗ್ಗಿತ್ತು. ಈ ಸಂದರ್ಭದಲ್ಲಿ ನಿನ್ನೆ ಕೊಡಗಿನಲ್ಲಿ‌ ಸ್ವಲ್ಪ ಪ್ರಮಾಣದ ಮಳೆಯಾಗಿತ್ತು. ಹೀಗಾಗಿ ಇಂದು ಕೆಆರ್‌ಎಸ್‌ ಡ್ಯಾಂಗೆ 1,151 ಕ್ಯೂಸೆಕ್ ನೀರು ಬಿಡಲಾಗಿದೆ.

2023ರಲ್ಲಿ ಇದೇ ಮೊದಲ ಬಾರಿಗೆ ಒಳಹರಿವಿನ ಪ್ರಮಾಣ ಸಾವಿರ ಕ್ಯೂಸೆಕ್ ದಾಟಿದೆ. ಕಳೆದ ವರ್ಷ ಈ ದಿನ ಡ್ಯಾಂಗೆ 22,467 ಕ್ಯೂಸೆಕ್ ಒಳಹರಿವು ಇತ್ತು.ಮೈಸೂರಿನ ಶಾಂತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಮಾನತು

ಕೆಆರ್‌ಎಸ್ ಇಂದಿನ ನೀರಿನ ಮಟ್ಟ:

  • ಗರಿಷ್ಠ ಮಟ್ಟ – 124.80 ಅಡಿಗಳು
  • ಇಂದಿನ ಮಟ್ಟ – 78.38 ಅಡಿಗಳು
  • ಗರಿಷ್ಠ ಸಾಂದ್ರತೆ – 49.452 ಟಿಎಂಸಿ
  • ಇಂದಿನ ಸಾಂದ್ರತೆ – 10.090 ಟಿಎಂಸಿ
  • ಒಳ ಹರಿವು – 1,151 ಕ್ಯೂಸೆಕ್
  • ಹೊರ ಹರಿವು – 308 ಕ್ಯೂಸೆಕ್
Copyright © All rights reserved Newsnap | Newsever by AF themes.
error: Content is protected !!