ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಉಷ್ಣತೆಯು ತೀವ್ರಗೊಳ್ಳುತ್ತಿದ್ದು, ಬಿಸಿಗಾಳಿ ಕೂಡಾ ಹೆಚ್ಚಾಗಿದೆ. ಈ ಹಿನ್ನೆಲೆ, ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ.
ಶಾರೀರಿಕ ಆರೋಗ್ಯಕ್ಕೆ ಮುಖ್ಯ ಸೂಚನೆಗಳು:
- ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುವುದು ಅವಶ್ಯಕ. ಬಾಯಾರಿಕೆ ಇಲ್ಲದಿದ್ದರೂ ಕೂಡಾ ಆಗಾಗ್ಗೆ ನೀರು ಕುಡಿಯಬೇಕು.
- ಪ್ರಯಾಣಿಸುವಾಗ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಅತ್ಯಗತ್ಯ.
- ORS ದ್ರಾವಣ, ನಿಂಬೆಹಣ್ಣಿನ ಶರಬತ್ತು, ಮಜ್ಜಿಗೆ, ಹಣ್ಣಿನ ಜ್ಯೂಸ್‌ಗಳನ್ನು ಉಪ್ಪಿನೊಂದಿಗೇ ಸೇವಿಸುವುದು ಉತ್ತಮ.
- ಜಲಾಂಶಗಲ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಉದಾ: ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಾಸ್, ಸೌತೆಕಾಯಿ, ಎಳೆನೀರು.
ಬಿಸಿಲಿನಿಂದ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು:
- ಹಗುರವಾದ, ಹತ್ತಿಯ ಬಟ್ಟೆಗಳನ್ನು ಧರಿಸಬೇಕು.
- ಬಿಸಿಲಿನಲ್ಲಿ ಹೊರಹೋಗುವ ಸಂದರ್ಭ, ಛತ್ರಿ, ಟೋಪಿ ಅಥವಾ ಟವೆಲ್ ಬಳಸಬೇಕು.
- ಪಾದರಕ್ಷೆ/ಚಪ್ಪಲಿ ಅಥವಾ ಶೂಸ್‌ಗಳನ್ನು ಧರಿಸಬೇಕು.
ಹವಾಮಾನ ಹಾಗೂ ಬಿಸಿಗಾಳಿಯ ಬಗ್ಗೆ ಎಚ್ಚರಿಕೆ:
- ಸ್ಥಳೀಯ ಹವಾಮಾನ ಮಾಹಿತಿ ಪಡೆಯಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಯಂತ್ರಣ ಕೇಂದ್ರದ ವೆಬ್‌ಸೈಟ್: www.ksndinc.org ಪರಿಶೀಲಿಸಬಹುದು.
- ತಣ್ಣನೆಯ, ಗಾಳಿ ಬೀಸುವ ಸ್ಥಳಗಳಲ್ಲಿ ಇರಲು ಪ್ರಯತ್ನಿಸಬೇಕು.
- ಮನೆ ಒಳಗೆ ಬಿಸಿ ಗಾಳಿ ಪ್ರವೇಶಿಸದಂತೆ ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಮುಚ್ಚಿ, ರಾತ್ರಿಯಲ್ಲಿ ತೆರೆದುಕೊಳ್ಳಬೇಕು.
ಹೊರಾಂಗಣ ಚಟುವಟಿಕೆಗಳ ಹಿತಸಾಲಹೆ:
- ಬೆಳಗಿನ ಅಥವಾ ಸಂಜೆ ವೇಳೆಯಲ್ಲಿ ಚಟುವಟಿಕೆಗಳನ್ನು ನಿರ್ವಹಿಸುವುದು ಉತ್ತಮ.
- 11AM-4PM ಅವಧಿಯಲ್ಲಿ ಬಿಸಿಲಿನೆದುರು ಚಟುವಟಿಕೆಗಳನ್ನು ತಪಿಸಬೇಕು.
- ಸಾರ್ವಜನಿಕ ಸಭೆಗಳಲ್ಲಿ ಶಾಮಿಯಾನ, ಗಾಳಿ ಸಂಚಲನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
ಬಿಸಿಗಾಳಿ ಹೆಚ್ಚು ಪರಿಣಾಮ ಬೀರುವ ಗುಂಪುಗಳು:
- ನವಜಾತ ಶಿಶುಗಳು, ಚಿಕ್ಕ ಮಕ್ಕಳು, ಗರ್ಭಿಣಿಯರು.
- ಹೊರಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರು.
- ಮಾನಸಿಕ/ಹೃದ್ರೋಗ ಮತ್ತು ರಕ್ತದೊತ್ತಡದ ಸಮಸ್ಯೆಗಳಿರುವವರು.
- ತಂಪಾದ ವಾತಾವರಣದಿಂದ ಬಿಸಿಯಾದ ವಾತಾವರಣಕ್ಕೆ ಹೋಗುವವರು.
ಇತರ ಮುನ್ನೆಚ್ಚರಿಕಾ ಕ್ರಮಗಳು:
- ಒಂಟಿಯಾಗಿ ವಾಸಿಸುವ ವೃದ್ಧರು ಅಥವಾ ರೋಗಿಗಳ ಮೇಲೆ ನಿಯಮಿತವಾಗಿ ಗಮನಹರಿಸಬೇಕು.
- ಮನೆಯ ಒಳಗೆ ತಂಪಾದ ವಾತಾವರಣ ಕಾಪಾಡಲು ಪರದೆ/ಷಟರ್ ಬಳಸಿ.
- ಫ್ಯಾನ್ ಅಥವಾ ತೇವವಾದ ಬಟ್ಟೆ ಬಳಸಿಕೊಂಡು ಶರೀರವನ್ನು ತಂಪಾಗಿಡಬೇಕು.
- ಸಾರ್ವಜನಿಕರು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಬೇಸಿಗೆಯ ಬಿಸಿಗಾಳಿ ಹಾನಿಯನ್ನು ತಡೆಯಲು ಸಾಧ್ಯವಾಗುತ್ತದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು