November 8, 2025

Newsnap Kannada

The World at your finger tips!

jds, election , protest

ಹೆಚ್‌ಡಿಕೆ ಬ್ರಾಹ್ಮಣ ವಿರೋಧಿ ಹೇಳಿಕೆ: ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಮುಳುವು ?

Spread the love

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬ್ರಾಹ್ಮಣ ಸಮುದಾಯದ ವಿರುದ್ಧ ನೀಡಿರುವ ಹೇಳಿಕೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಇದೆ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬ್ರಾಹ್ಮಣ ಸಮುದಾಯ ಕುರಿತ ಹೇಳಿಕೆ ಬಗ್ಗೆ ನಾನಾ ಲೆಕ್ಕಾಚಾರಗಳು ಆರಂಭವಾಗದೆ.

ಹಳೇ ಮೈಸೂರು ಭಾಗದ ಜೆಡಿಎಸ್ ಅಭ್ಯರ್ಥಿಗಳು ಈಗ ಧರ್ಮ ಸಂಕಟಕ್ಕೆ ಸಿಲುಕಿದ್ದಾರೆ.‘ಅಂಬೇಡ್ಕರ್ ಅಭಿವೃದ್ಧಿ ನಿಗಮ’ದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ವಿರೋಧಿ ಮತಗಳ ಪಾಲಿಗೆ ಜೆಡಿಎಸ್ ಆಸರೆಯಾಗಿದ್ದವು ಬ್ರಾಹ್ಮಣ ಸಮುದಾಯ ಸಹ ಸಾಕಷ್ಟು ಹಂತದಲ್ಲಿ ಜೆಡಿಎಸ್ ನಾಯಕರನ್ನು ಬೆಂಬಲಿಸಿತ್ತು. ಕಾಂಗ್ರೆಸ್ ವಿರೋಧಿ ಮತಗಳನ್ನು ಕ್ರೋಢಿಕರಿಸುವ ಜೆಡಿಎಸ್‌ ಸಮುದಾಯಕ್ಕೆ ದೊಡ್ಡ ಮಟ್ಟದ ಬೆಂಬಲ ಈ ಸಮುದಾಯದಿಂದ ಸಿಕ್ಕಿತ್ತು. ಆದರೆ ಈಗ ಜೆಡಿಎಸ್ ಗೆ ಎಲ್ಲಾ ಉಲ್ಟಾ ಆಗಲಿದೆ.

ರಾಜ್ಯದಲ್ಲಿ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಕುಮಾರಸ್ವಾಮಿ ಬ್ರಾಹ್ಮಣ ಸಮುದಾಯದ ವಿರುದ್ಧ ನೀಡಿದ ಹೇಳಿಕೆ ಈಗ ಈಗ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಹೊಸ ಭಯ ಹುಟ್ಟು ಹಾಕಿದೆ ಎಂಬ ವಿಶ್ಲೇಷಣೆ ಮಾತುಗಳು ಕೇಳಿ ಬಂದಿವೆ.

error: Content is protected !!