ಸಿಎಂ ವಿರುದ್ಧ ಬಿಜೆಪಿ ಮೈಸೂರು ಛಲೋ ಪಾದಯಾತ್ರೆಗೆ ಎಚ್ ಡಿಕೆ ವಿರೋಧ : ಜೆಡಿಎಸ್ ಬೆಂಬಲ ಇಲ್ಲ

Team Newsnap
1 Min Read

ದೆಹಲಿ : ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಆ.3 ರಿಂದ ಬಿಜೆಪಿ ಆರಂಭಿಸಲು ಉದ್ದೇಶಿಸಿರುವ ಮೈಸೂರು ಚಲೋ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ನೀಡುತ್ತಿಲ್ಲವೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.

ನವದೆಹಲಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ‘ರಾಜಕಾರಣ ಬೇರೆ, ಈ ರೀತಿ ಕಾರ್ಯಕ್ರಮದಿಂದ ಏನು ಸಾಧನೆ ಮಾಡಲು ಸಾಧ್ಯ? ಬಿಜೆಪಿಯವರು ನಡೆದುಕೊಂಡ ರೀತಿ ನನ್ನ ಮನಸ್ಸಿಗೆ ನೋವಾಗಿದೆ ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನದ ಕಿಡಿ ಕಾರಿದು.

ಪಾದಯಾತ್ರೆ ಮುಖ್ಯಸ್ಥರನ್ನಾಗಿ ಪ್ರೀತಂಗೌಡ ನನ್ನು ನೇಮಕ ಮಾಡಿದ್ದಾರೆ ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡಲು ಹೊರಟಿರುವ ಅವನನ್ನು ಸಭೆಗೆ ಕರಿತಾರೆ, ಅದಕ್ಕೆ ನನ್ನನ್ನೂ ಕರೀತಾರೆ, ನನಗೂ ಸಹಿಸೋಕೆ ಇತಿ ಮಿತಿ ಇದೆ ಎಂದು ಮಿತ್ರ ಪಕ್ಷ ಬಿಜೆಪಿಯ ಮುಖಂಡರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದಾರೆ.

ಪೆನ್‌ಡ್ರೈವ್‌ ಬೀದೀಲಿ ಹಂಚೋಕೆ ಯಾರು ಕಾರಣ ಎಂದು ಬಿಜೆಪಿಗರಿಗೆ ಪ್ರಶ್ನಿಸಿರುವ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ನನ್ನ ಕುಟುಂಬಕ್ಕೆ ವಿಷ ಹಾಕಿದವರನ್ನು ನನ್ನ ಜೊತೇಲಿ ಕೂರಿಸ್ತಾರೆ. ಈಗ ಪಾದಯಾತ್ರೆಗೆ ನಮ್ಮ ಬೆಂಬಲ ಕೇಳ್ತಾರಾ? ಎಂದು ಹರಿಹಾಯ್ದರು.ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ಯಾವುದೋ ಒಂದು ಪ್ರಕರಣ ಇಟ್ಕೊಂಡು ಪಾದಯಾತ್ರೆ ಮಾಡೋದು ಎಷ್ಚು ಸರಿ? ಜನರ ಭಾವನೆ, ನೋವಿಗೆ ಸ್ಪಂದಿಸಬೇಕಾಗಿದೆ. ರಾಜಕೀಯವೇ ನಮಗೆ ಪ್ರಾಮುಖ್ಯವಲ್ಲ ಎಂದು ಬಿಜೆಪಿ ಆಯೋಜಿಸಿರುವ ಪಾದಯಾತ್ರೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

Share This Article
Leave a comment