‘ಅಧಿಕಾರದ ಆಸೆಗೆ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಜಿಗಿದ ಸಿದ್ದರಾಮಯ್ಯ ನಮ್ಮ ಪಕ್ಷವನ್ನು ಅವಕಾಶವಾದಿ ಪಕ್ಷ ಎನ್ನುವ ಮೂಲಕ ತಮ್ಮ ಬಣ್ಣ ಬದಲಿಸುವ ಊಸರವಳ್ಳಿ ರಾಜಕಾರಣಿ ಎನ್ನುವುದನ್ನು ಬಯಲು ಮಾಡಿದ್ದಾರೆ’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
‘ಜೆಡಿಎಸ್ ಒಂದು ಅವಕಾಶವಾದಿ ಪಕ್ಷ’ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಯ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿರುವ ಎಚ್,ಡಿ.ಕೆ ಜೆಡಿಎಸ್ ಪಕ್ಷದಲ್ಲಿದ್ದಾಗ ಅಧಿಕಾರ ದಾಹಕ್ಕಾಗಿ ತಮ್ಮ ಬೆಂಬಲಿಗರೊಡನೆ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರವಾದ ಅವಕಾಶವಾದಿ, ಕೃತಘ್ನಗೇಡಿ ಸಿದ್ದರಾಮಯ್ಯನವರಿಂದ ನಾವು ಸ್ವಾಭಿಮಾನ ಕಲಿಯಬೇಕಿಲ್ಲ’ ಎಂದು ಆಕ್ರೋಶದಿಂದ ಹೇಳಿದ್ದಾರೆ.
‘ನೀವು ಮುಖ್ಯಮಂತ್ರಿಯಾಗಿದ್ದಾಗಲೇ ಕಾಂಗ್ರೆಸ್ ನ್ನು ಬುಡ ಸಮೇತ ಕಿತ್ತೊಗೆಯಬೇಕು ಎಂದು ಹೇಳುವ ಮೂಲಕ ನೀವು ಎಂತಹ ಎಡಬಿಡಂಗಿ ನಾಯಕ ಎಂದು ತೋರಿಸಿಕೊಂಡಿದ್ದೀರಿ. ದೇವೆಗೌಡರು ಅಧಿಕಾರದಲ್ಲಿದ್ದಾಗ ಪ್ರಧಾನಿ ಹುದ್ದೆ ಉಳಿಸಿಕೊಳ್ಳಬಹುದಿತ್ತು. ಆದರೆ ಅವರದ್ದು ಸ್ವಾಭಿಮಾನಿ ರಾಜಕಾರಣ. ಅದನ್ನು ಮರೆತಿರಾ? ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದೆ. ಜನಪರ ಕಾರ್ಯಗಳನ್ನು ಮಾಡಿದೆ. ನಿಮ್ಮ ಸ್ವಾರ್ಥ ರಾಜಕಾರಣದ ಕುಟಿಲ ತಂತ್ರಗಳನ್ನು ಮರೆ ಮಾಚಿಕೊಳ್ಳಲು ಬೆಳೆದ ಪಕ್ಷದ ಮಗ್ಗುಲಲ್ಲಿದ್ದು ಚಾಕು ಹಾಕಿದವರ ಈ ಮಾರ್ಜಾಲ ಉಪದೇಶ ಯಾರಿಗೆ ಬೇಕು?’ ಎಂದು ಕಿಡಿ ಕಾರಿದ್ದಾರೆ.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು