ಪಂಚೆ ಹಾಕಿಕೊಂಡು ಶೋ ಮಾಡಿದವರು ರೈತರೆ – ಡಿಕೆಶಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ

Team Newsnap
1 Min Read

ರಾಜ್ಯದ ಜನರಿಗೆ ಗೊತ್ತಿದೆ ಕುಮಾರಸ್ವಾಮಿ ಕೊಡುಗೆ ಏನೆಂದು ಗೊತ್ತಿದೆ. ನೀರಾವರಿ ವಿಚಾರವಾಗಿ ದೇವೇಗೌಡರ ಕೊಡುಗೆ ಏನೆಂದು ಗೊತ್ತಿದೆ. ಮೊನ್ನೆ ಹಾಸನದಲ್ಲಿ ಹೇಳಿದ್ದಾರೆ ಏನ್ ಪಂಚೆ ಹಾಕಿದವರೆಲ್ಲ ರೈತರ ಮಕ್ಕಳಾಗ್ತಾರಾ, ನಾವು ಪಂಚೆ ಹಾಕಿದ್ದೇವೆ ನಾವು ರೈತರು ಎಂದಿದ್ದಾರೆ. ಪಂಚೆ ಹಾಕಿಕೊಂಡು ಶೋ ಮಾಡಿದವರು ರೈತರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ  ಮಾಜಿ ಮುಖ್ಯಮಂತ್ರಿ ಎಚ್‍.ಡಿ ಕುಮಾರಸ್ವಾಮಿ ಪರೋಕ್ಷ ಟಾಂಗ್ ನೀಡಿದರು.

dks ku1

ಬಿಡದಿಯ ಕೇತಗಾನಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಎದೆ ಮೇಲೆ ಬೋರ್ಡ್ ಹಾಕಿಕೊಂಡಿಲ್ಲ ರೈತರ ಮಕ್ಕಳು ಎಂದು. ಜನರೇ ಅವರವರ ಕಾರ್ಯ ನೋಡಿ ಬಿರುದು ಕೊಡ್ತಾರೆ ಎಂದರು’

ಪಂಚೆ ಹಾಕಿಕೊಂಡು ಶೋ ಮಾಡಿದವರು ರೈತರಾಗಲ್ಲ. ಈಗ ನೋಡಿದ್ದೇವೆ ನಾವು ತಲಕಾವೇರಿಯಲ್ಲಿ ಎಲ್ಲರನ್ನೂ ದೂರ ಕಳುಹಿಸಿ ಕಾವೇರಿ ನೀರಿಗೆ ಅಕ್ಷತೆ ಹಾಕೋದನ್ನು. ಮೆಟ್ಟಿಲಿಗೆ ನಮಸ್ಕಾರ ಮಾಡಿಕೊಂಡಿದನ್ನು ನೋಡಿದ್ದೇವೆ. ಇದು ನರೇಂದ್ರ ಮೋದಿಯವರನ್ನು ನೋಡಿ ಕಾಪಿ ಮಾಡಿದ್ದಾರೆ ಎಂದು ಡಿಕೆಶಿ ಹೆಸರು ಬಳಸದೇ ಎಚ್‍ಡಿಕೆ ಕಿಡಿಕಾರಿದ್ದಾರೆ.


ಇದೆಲ್ಲವೂ ಆರ್ಟಿಫಿಷಿಯಲ್ ಹೋರಾಟಗಳು ನಡಿಯಲ್ಲ. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಹೋರಾಟ ನೋಡಿಲ್ವ. ಕೃಷ್ಣೆಯ ನೀರನ್ನು ಇವರು ಉಳಿಸಿದ್ದನ್ನು ನೋಡಿದ್ದೇವೆ. ಈಗ ಮೇಕೆದಾಟು ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆ ಮೂಲಕ ಸ್ವಾಮೀಜಿಗಳನ್ನು ಪಾದಯಾತ್ರೆಗೆ ಕರೆಯುತ್ತಿದ್ದಾರೆ. ಹೋಗಿ ದೆಹಲಿಯಲ್ಲಿ ಉಪವಾಸ ಕುಳಿತುಕೊಳ್ಳಿ ಕೇಂದ್ರ ಸರ್ಕಾರದ ಮುಂದೆ. ಇದು ಜನರನ್ನು ಪರಿವರ್ತನೆ ಮಾಡುವ ಸಲುವಾಗಿ ಹೋರಾಟ ಅಲ್ಲ ಮತಕ್ಕಾಗಿ ನಡೆಯುತ್ತಿರುವ ಪಾದಯಾತ್ರೆ ಅಷ್ಟೇ ಆದರೆ ಎಲ್ಲಾ ಸಂದರ್ಭದಲ್ಲಿಯೂ ಜನರನ್ನು ಪರಿವರ್ತಿಸಲು ಆಗಲ್ಲ. ಅದಕ್ಕೆ ಮೂಲ ಉದ್ದೇಶ ಇರಬೇಕು ಎಂದು ಟಾಂಗ್ ನೀಡಿದ್ದಾರೆ.

Share This Article
Leave a comment