January 29, 2026

Newsnap Kannada

The World at your finger tips!

shiva

ಅಭಿಮಾನಿಯೊಂದಿಗೆ ಬೈಕ್ ಓಡಿಸಿದ “ಹ್ಯಾಟ್ರಿಕ್ ಹೀರೋ”

Spread the love

ತಮ್ಮ ಅಭಿಮಾನಿಯ ಆಸೆಯಂತೆ ಆತನ ಹೊಸ ಬೈಕನ್ನು ಓಡಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಅಭಿಮಾನಿಗಳ ಕೋರಿಕೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.


ಅಭಿಮಾನವೆಂದರೆ ಹೀಗೇನೆ.. ಅದಕ್ಕೆ ನಾನಾ ಮುಖಗಳು. ಅಭಿಮಾನಿಗಳನ್ನು ದೇವರೆಂದು ಕರೆದ ಅಣ್ಣಾವ್ರ ಹಾದಿಯಲ್ಲೇ ಸಾಗಿದ್ದಾರೆ ಅವರ ಪತ್ರ ಶಿವಣ್ಣ. ಸಣ್ಣದಿರಲಿ, ದೊಡ್ಡದಿರಲಿ, ಅಸೆಗಳನ್ನು ಪೂರೈಸಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.


ಹೊಸ ಬೈಕ್ ಖರೀದಿಸಿದ ಅಭಿಮಾನಿಯೊಬ್ಬ ಅದನ್ನು ತೋರಿಸಲು ತಮ್ಮ ನೆಚ್ಚಿನ ನಟನ ಮೆನೆಗೆ ಹೋಗಿದ್ದಾನೆ. ವಿಷಯ ತಿಳಿದು ಹೊರ ಬಂದ “ಕರುನಾಡ ಚಕ್ರವರ್ತಿ’ ಅಭಿಮಾನಿಗೆ ಶುಭ ಹಾರೈಸಿ ಬೈಕೆ ಮೇಲೆ ಆಟೋಗ್ರಾಫ್ ಹಾಕಿದ್ದಾರೆ.


ಇಷ್ಟಕ್ಕೆ ಬಿಡದ ಆ ಅಭಿಮಾನಿ ಹೊಸ ಬೈಕನ್ನು ತಾವೂ ಓಡಿಸಬೇಕೆಂಬ ಬೇಡಿಕೆ ಇಟ್ಟ. ಅರವತ್ತಾದರೂ ಯುವಕರನ್ನೂ ನಾಚಿಸುಂತೆ, ಪಾದರಸದಂತಿರುವ ಶಿವಣ್ಣ, ಜಮಾಯ್ಸು ಎನ್ನುವಂತೆ ಬೈಕನ್ನು ಏರಿ, ಅಭಿಮಾನಿಯನ್ನು ಹಿಂದೆ ಕೂರಿಸಿಕೊಂಡು ಹೊರಟೇಬಿಟ್ಟರು. ಇದರಿಂದ ಆ ಅಭಿಮಾನಿಗಾದ ಆನಂದ ವರ್ಣಿಸಲು ಅಸಾಧ್ಯ.

error: Content is protected !!