ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ. ಈಗ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ.
ಕೇವಲ ಅತ್ಯಾಚಾರ ಮಾತ್ರದ ಪ್ರಕರಣ ಅಲ್ಲದೇ ಇದು ಕೊಲೆಯ ಪ್ರಕರಣವೂ ಆಗಿರುವದರಿಂದ ಇಂಡಿಯನ್ ಪೀನಲ್ ಕೋಡ್ 302ರ ಪ್ರಕಾರ ಎಫ್‌ಐಆರ್ ದಾಖಲಿಸಿರುವ ಕೇಂದ್ರ ತನಿಖಾ ದಳ, ವಿವಿಧ ಕೋನಗಳಲ್ಲಿ ತನಿಖೆ ನಡೆಸಲು ಹಲವು ಉಪತಂಡಗಳನ್ನು ರಚಿಸಿದೆ.
‘ಪ್ರಮುಖ ಆರೋಪಿಯಾದ ಸಂದೀಪ್ ರಾಗಿ ಜಮೀನಿನಲ್ಲಿ ತನ್ನ ತಂಗಿಯನ್ನು ಅತ್ಯಾಚಾರ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ’ ಎಂದು ಸಂತ್ರಸ್ತೆಯ ಸಹೋದರ ಚಂದ್ರ ಪ್ಪ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸಂತ್ರಸ್ತೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸೆಪ್ಟೆಂಬರ್ 29ರಂದು ಅಸುನೀಗಿದ್ದಳು.
ಈಗಾಗಲೇ, ರಾಮು, ಲವ, ಕುಶ, ರವಿ ಎಂಬ ನಾಲ್ವರು ಆರೋಪಿಗಳನ್ನು ಪೋಲೀಸರು ಬಂಧನ ಮಾಡಿದ್ದಾರೆ.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ