Karnataka

ಹಾಸನದ ಹಿರಿಯ ಪತ್ರಕರ್ತ ಮುರುಳಿ ನಿಧನ

ಹಾಸನ: ಹಾಸನವಾಣಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಮುರಳಿ(55) ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ
ನಿಧನರಾಗಿದ್ದಾರೆ.


ಹಿರಿಯ ಪತ್ರಕರ್ತೆ ಲೀಲಾವತಿ ಅವರ ಪುತ್ರನಾಗಿದ್ದ ಮುರುಳಿ, ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಯಾಗಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಸ್ನೇಹಜೀವಿ ಮುರುಳಿ,
ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನ ಮತ್ತು ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಮುರುಳಿ ಅವರ ಅಂತ್ಯಕ್ರಿಯೆ ಹಾಸನದ ಬಿಟ್ಟಗೋಡನಹಳ್ಳಿ ರುದ್ರಭೂಮಿಯಲ್ಲಿ ನಡೆಯಿತು.

ಕೆಯುಡಬ್ಲೂಜೆ ಸಂತಾಪ:

ಹಿರಿಯ ಪತ್ರಕರ್ತ ಮುರುಳಿ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಸ್ನೇಹ ಜೀವಿಯಾಗಿದ್ದ ಪತ್ರಕರ್ತ ಮುರುಳಿ ಸಂಘಟಕನಾಗಿಯೂ ಗಮನ ಸೆಳೆದಿದ್ದರು. ಅವರ ಸಾವಿನ ಸುದ್ದಿ ಅರಗಿಸಿಕೊಳ್ಳಲಾರದ ಸಂಗತಿ ಎಂದು ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶೋಕಿಸಿದ್ದಾರೆ.ಹೆತ್ತ ಮಗನನ್ನೇ ಇರಿದು ಕೊಂದ ಪಾಪಿ ತಂದೆ

ಮುರುಳಿ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

Team Newsnap
Leave a Comment

Recent Posts

ಮೆದುಳು ತಿನ್ನುವ ಅಮೀಬಾಗೆ ನಾಲ್ಕು ಮಕ್ಕಳು ಬಲಿ

ಮಂಗಳೂರು: ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಕೇರಳದಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿರುವ ಪ್ರಕರಣದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಆರೋಗ್ಯ… Read More

July 8, 2024

ರಾಜ್ಯದಲ್ಲಿ 8 IAS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು :ರಾಜ್ಯ ಸರ್ಕಾರ ಎಂಟು ಮಂದಿ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ… Read More

July 7, 2024

ಕೆ ಆರ್ ಎಸ್ ಗೆ 102 ಅಡಿ:11 ಸಾವಿರ ಕ್ಯುಸೆಕ್ ಒಳಹರಿವು – ಕಬಿನಿಗೆ ಭರ್ತಿಗೆ 3ಅಡಿ ಬಾಕಿ

ಕೆಆರ್ ಎಸ್ ನೀರಿನ ಮಟ್ಟ 102.00ರ ಅಡಿ ಗಡಿದಾಟಿದೆ . ಕಬಿನಿ ಜಲಾಶಯದ ನೀರಿನ ಮಟ್ಟ2280.30 ಅಡಿ ಇದೆ ಭರ್ತಿಗೆ… Read More

July 7, 2024

ತಾತ್ಕಾಲಿಕವಾಗಿ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ಗೆ ತಡೆ : ಚೆಲುವರ್ಯಸ್ವಾಮಿ

ಮಂಡ್ಯ : ಸಚಿವ ಚಲುವರಾಯಸ್ವಾಮಿ ತುರ್ತು ಸಭೆ ನಡೆಸಿದ್ದು, ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ಗೆ ತಾತ್ಕಾಲಿಕ ತಡೆ ನೀಡಿದ್ದಾರೆ. ಸರ್ಕಾರ… Read More

July 6, 2024

ವಿದ್ಯಾರ್ಥಿ ಮೊಬೈಲ್ ಚಾರ್ಜ್ ಹಾಕಲು ಹೋಗಿ ದುರ್ಮರಣ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊಬೈಲ್ ಚಾರ್ಜ್ ಹಾಕಲು ಹೋಗಿ ಎಲೆಕ್ಟ್ರಿಕ್ ಶಾಕ್ ನಿಂದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಡೆದಿದೆ.… Read More

July 6, 2024

“ಹೃದಯದ ಸ್ವಾಸ್ಥ್ಯ ಕಾಪಾಡುವ ಬಾಳೆ ಹೃದಯ”

"ಬಾಳೆಗೆ ಒಂದೇ ಗೊನೆ ರಾಗಿಗೆ ಒಂದೇ ತೆನೆ"! ಎಂಬ ಮಾತಿನಂತೆ ಬಾಳೆಯು ನಮ್ಮ ಬದುಕಿನುದ್ದಕ್ಕೂ ಒಂದಲ್ಲಾ ಒಂದು ರೀತಿಯಲ್ಲಿ ಸಂಬಂಧ… Read More

July 6, 2024