ಕನ್ನಡದ ನಟಿ ಹರ್ಷಿಕಾ ಪೂಣಚ್ಚ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಈಗ ಉತ್ತರ ಭಾರತದತ್ತ ಪ್ರಯಾಣ ಆರಂಭಿಸಿದ್ದಾರೆ.
ಕನ್ನಡ, ತಮಿಳು, ತೆಲುಗು, ಕೊಡವ, ಮಲಾಯಳಂ ಸಿನಿಮಾಗಳಲ್ಲಿ ನಟಿಸಿರುವ ಹರ್ಷಿಕಾ ಪೂಣಚ್ಚ ಈಗ ಭೊಜಪುರಿ ಭಾಷೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಹರ್ಷಿಕಾ ಪೂಣಚ್ಚ ಇದೇ ಮೊದಲ ಬಾರಿಗೆ ಭೋಜ್‌ಪುರಿ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಸಂಪೂರ್ಣ ಚಿತ್ರೀಕರಣ ಲಂಡನ್‌ನಲ್ಲಿಯೇ ನಡೆಯಲಿದೆಯಂತೆ.
ಭೋಜ್‌ಪುರಿ ಚಿತ್ರರಂಗದ ಸೂಪರ್ ಸ್ಟಾರ್ ನಟ ಪವನ್ ಸಿಂಗ್ ಸಿನಿಮಾದ ನಾಯಕರಾಗಿದ್ದು, ಈ ಸಿನಿಮಾ ಭೋಜ್‌ಪುರಿ ಜೊತೆಗೆ ಹಿಂದಿ ಭಾಷೆಯಲ್ಲಿ ಸಹ ಬಿಡುಗಡೆ ಆಗಲಿದೆ. ಸಿನಿಮಾದ ಚಿತ್ರೀಕರಣ ಶೇ 50 ರಷ್ಟು ಪೂರ್ಣವಾಗಿದೆ.
ಸಿನಿಮಾದ ಚಿತ್ರೀಕರಣ ಈಗಾಗಲೆ ಲಂಡನ್‌ನಲ್ಲಿ ನಡೆಯುತ್ತಿದ್ದು, ಸಿನಿಮಾದ ಸಂಪೂರ್ಣ ಚಿತ್ರೀಕರಣ ಲಂಡನ್‌ನಲ್ಲಿಯೇ ನಡೆಯಲಿದೆ. ಸಿನಿಮಾದಲ್ಲಿ ಲಂಡನ್‌ನ ಶ್ರೀಮಂತ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹರ್ಷಿಕಾ ಪೂಣಚ್ಚ.
ಹರ್ಷಿಕಾ ಪೂಣಚ್ಚ ನಟಿಸುತ್ತಿರುವ ಭೊಜ್‌ಪುರಿ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾವನ್ನು ಯಾಶಿ ಪ್ರೊಡಕ್ಷನ್‌ನಲ್ಲಿ ಅಭಯ್ ಸಿನ್ಹಾ ಎಂಬುವರು ನಿರ್ಮಿಸುತ್ತಿದ್ದಾರೆ. ಪ್ರೇಮಾಂಶು ಸಿಂಗ್ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.
ಹರ್ಷಿಕಾ ಪೂಣಚ್ಚ ಕನ್ನಡದ ಕೆಲವು ಸಿನಿಮಾಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. ಶಿವರಾಜ್ ಕುಮಾರ್-ಡಾಲಿ ಧನಂಜಯ್ ನಟಿಸುತ್ತಿರುವ ‘ಶಿವಪ್ಪ’ ಸಿನಿಮಾದಲ್ಲಿ ಹರ್ಷಿಕಾ ನಟಿಸಲಿದ್ದಾರೆ ಎನ್ನಲಾಗಿದೆ. ಉನ್ ಕಾದಲ್ ಇರುಂದಾಲ್ ಎಂಬ ತಮಿಳು ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.
- ಮೋಕ್ಷವನ್ನು ನೀಡುವ “ಮೋಕ್ಷದಾ ಏಕಾದಶಿ (ವೈಕುಂಠ ಏಕಾದಶಿ )”
- ತಿರುಪತಿ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಟಿಟಿಡಿಯಿಂದ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ
- ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
- ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
- KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
More Stories
ಮೋಕ್ಷವನ್ನು ನೀಡುವ “ಮೋಕ್ಷದಾ ಏಕಾದಶಿ (ವೈಕುಂಠ ಏಕಾದಶಿ )”
ತಿರುಪತಿ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಟಿಟಿಡಿಯಿಂದ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ
ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್