ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಸಂತೋಷದ ಸುದ್ದಿಯನ್ನು ಹರ್ಷಿಕಾ ಅವರ ಪತಿ ಭುವನ್ ಪೊನ್ನಣ್ಣ (Bhuvann Ponnanna) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಈ ಹೆಣ್ಣು ಮಗುವಿನ ಜನ್ಮವಾಗಿದ್ದು , ಹರ್ಷಿಕಾ ಮತ್ತು ಭುವನ್ ಕುಟುಂಬಸ್ಥರು ಹೆಣ್ಣು ಮಗುವಿನ ಆಗಮನದಿಂದ ಸಂತಸಗೊಂಡಿದ್ದಾರೆ.ಇದನ್ನು ಓದಿ –ಆಹಾರಕ್ಕಾಗಿ ನಾಡಿಗೆ ಬರುವ ಯತ್ನದಲ್ಲೆ ಕಂದಕಕ್ಕೆ ಬಿದ್ದ ಕಾಡಾನೆ ಸಾವು
ಭುವನ್ ತನ್ನ ಪೋಸ್ಟಿನಲ್ಲಿ, “ಎಲ್ಲರಿಗೂ ನಮಸ್ಕಾರ, ನಮ್ಮ ‘ಚೈಕಾರ್ತಿ ಮೂಡಿ’ ಜನಿಸಿದ್ದನ್ನು ತಿಳಿಸಲು ಸಂತೋಷ ಪಡುತ್ತಿದ್ದೇವೆ. ಹರ್ಷಿ ಮತ್ತು ಮಗಳು ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ, ಮಗಳು ಹರ್ಷಿಕಾಳಂತೆ ಇದ್ದರೆ, ಅವಳ ಪ್ರಕಾರ ಮಗು ನನ್ನ ಕಾಪಿಯಂತಾಗಿದೆ,” ಎಂದು ಬರೆದುಕೊಂಡಿದ್ದಾರೆ.
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ