ಮಾಜಿ ಸಾಲಿಸಿಟರ್ ಜನರಲ್, ಕುಲಭೂಷಣ್ ಜಾಧವ್ ನೇಣುಶಿಕ್ಷೆ ತಪ್ಪಿಸಲು ಭಾರತದ ಪರ ಐಸಿಜೆಯಲ್ಲಿ ವಾದಿಸಿ ಕೇವಲ 1 ರು ಫೀಸ್ ಪಡೆದಿದ್ದ ಸುಪ್ರೀಂ ಕೋಟ್ ಹಿರಿಯ ವಕೀಲ ಹರೀಶ್ ಸಾಳ್ವೆ ಬುಧವಾರ ಎರಡನೇ ಮದುವೆ ಮಾಡಿಕೊಳ್ಳಲಿದ್ದಾರೆ.
40 ವರ್ಷ ದಾಂಪತ್ಯ ನಡೆಸಿ ವಿಚ್ಛೇದನ ನೀಡಿದ ನಂತರ ಲಂಡನ್ ಮೂಲದ ಕಲಾವಿದೆ ಕ್ಯಾರೊಲೀನ್ ಬ್ರೊಸ್ಸಾರ್ಡ್ ಅವರನ್ನು ಚಚ್ ೯ ನಲ್ಲಿ ಇಂದು ಸಾಳ್ವೆ ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ.
65 ವರ್ಷದ ಸಾಳ್ವೆ ಕಳೆದ ಜೂನ್‌ನಲ್ಲಿ ಪತ್ನಿ ಮೀನಾಕ್ಷಿ ಅವರಿಗೆ ವಿಚ್ಛೇದನ ನೀಡಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮಗಳು 37 ವರ್ಷದ ಸಾಕ್ಷಿ, ಎರಡನೇ ಮಗಳು 33 ವರ್ಷದ ಸಾನಿಯಾ. ಸದ್ಯ ಸಾಳ್ವೆ ಅವರ ಕೈಹಿಡಿಯುತ್ತಿರುವ ಕಲಾವಿದೆ ಕ್ಯಾರೊಲೀನ್‌ಗೂ 18 ವರ್ಷದ ಪುತ್ರಿಯಿದ್ದಾಳೆ.
ಭಾರತದ ಮಾಜಿ ಸಾಲಿಸಿಟರ್ ಜನರಲ್ ಆಗಿರುವ 65 ವರ್ಷದ ಹರೀಶ್ ಸಾಳ್ವೆ, ಜನವರಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ನ ಕ್ವೀನ್ಸ್ ಕೌನ್ಸೆಲ್ ಆಗಿ ನೇಮಕವಾಗಿದ್ದರು. ಸಾಳ್ವೆ ಅವರು ಈಗಉತ್ತರ ಲಂಡನ್ ನಲ್ಲಿ ನೆಲೆಸಿದ್ದಾರೆ.
ಚಿತ್ರಕಲಾ ಕಾರ್ಯಕ್ರಮವೊಂದರಲ್ಲಿ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ವರ್ಷಗಳಿಂದ ಇಬ್ಬರೂ ಪರಿಚಿತರಾಗಿದ್ದಾರೆ.
ಕೊರೊನಾ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ವಿವಾಹಕ್ಕೆ ಕೇವಲ 15 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗುವುದು ಎಂದು ಆಪ್ತ ಮೂಲಗಳು ತಿಳಿಸಿವೆ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ