January 8, 2025

Newsnap Kannada

The World at your finger tips!

marath

ಹೆಂಡತಿಗೆ ಕಿರುಕುಳ , ಸುಂದರಿಯರ ಜೊತೆ ಸರಸ : ಫ್ಯಾಷನ್ ಡಿಸೈನರ್ ಪರಾರಿ!

Spread the love

ಪತ್ನಿಗೆ ನಿರಂತರ ಕಿರುಕುಳ ಹಾಗೂ ಅನೇಕ ಸುಂದರಿಯರ ಜೊತೆ ರಾಸಲೀಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ಸಿನಿಮಾ ನಿರ್ಮಾಪಕ ದಿನಕರ್ ವಿರುದ್ಧ ದೂರು ದಾಖಲಾಗಿದೆ.

ಬೆಂಗಳೂರಿನ ಮಾರತ್ತಹಳ್ಳಿ ಠಾಣೆಯಲ್ಲಿ ಪತ್ನಿ ಹಾಗೂ ಮಹಿಳೆಯೊಬ್ಬರ ದೂರಿನ ಮೇರೆಗೆ ಎಫ್ ಐಆರ್ ದಾಖಲಾ ಗುತ್ತಿದ್ದಂತೆ ದಿನಕರ್‌ ಪರಾರಿಯಾಗಿದ್ದಾರೆ

ಫ್ಯಾಷನ್ ಡಿಸೈನರ್ ದಿನಕರ್

ಮಲಯಾಳಂನಲ್ಲಿ ಮೈ ಸ್ಟೋರಿ ಚಿತ್ರ ನಿರ್ಮಿಸಿದ್ದ ದಿನಕರ್‌ ಸೌತ್ ಇಂಡಿಯಾ ಸಿನಿರಂಗದ ಫೇಮಸ್ ಫ್ಯಾಷನ್ ಡಿಸೈನರ್ ಕೂಡ ಹೌದು.

ಇಬ್ಬರು ಗಂಡು ಮಕ್ಕಳು ಇರುವ ದಿನಕರ್ ತನಗೆ ಕಿರುಕುಳ ನೀಡಿ ಅನೇಕ ಸುಂದರಿಯರ ಜೊತೆ ರಾಸಲೀಲೆ ನಡೆಸುವುದನ್ನು ಪ್ರಶ್ನಿಸಿದ್ದಕ್ಕೆ ತನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಎಂದು ದಿನಕರ್​ ಪತ್ನಿ ಆರೋಪಿಸಿದ್ದಾರೆ.

ಸುಂದರವಾಗಿರುವ ಯುವತಿಯರೇ ಟಾರ್ಗೆಟ್ :

marath1

ಹಲವು ಮಹಿಳೆಯರಿಗೆ ತಾನು ನಿರ್ಮಾಪಕ ಅಂತಾ ಮೆಸೇಜ್ ಮಾಡ್ತಿದ್ದ ದಿನಕರ್ ಫೇಸ್​ ಬುಕ್​, ಇನ್​ಸ್ಟಾಗ್ರಾಂನಲ್ಲಿ ಸುಂದರವಾಗಿರೋ ಯುವತಿಯರಿಗೆ ಮೆಸೇಜ್ ಮಾಡಿ ಹೊಸ ಚಿತ್ರ ನಿರ್ಮಾಣ ಮಾಡ್ತಿದ್ದೀನಿ.ನಿಮಗೆ ಅವಕಾಶ ಕೊಡ್ತೀನಿ ಅಂತಾ ಹೇಳುತ್ತಿದ್ದನು ಎಂದು ಆತನ ಪತ್ನಿ ಆರೋಪಿಸಿದ್ದಾರೆ.

ಅಶ್ಲೀಲವಾಗಿ ಮೆಸೇಜ್ ಮಾಡ್ತಿದ್ದ ದಿನಕರ್​ ಹಲವು ಮಹಿಳೆಯರ ಜೊತೆ ಅಕ್ರಮ ಸಂಬಂಧ ಬೆಳೆಸ್ತಿದ್ದನಂತೆ. ಈ ನಡುವೆ, ಮಾರತ್ತಹಳ್ಳಿಯಲ್ಲಿರುವ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಸಹ ಹೊಂದಿದ್ದ ಎಂದು ನಿರ್ಮಾಪಕನ ಪತ್ನಿ ಆರೋಪಿಸಿದ್ದಾರೆ.

ಬಹಿರಂಗವಾದ ಲೀಲೆಗಳು…

sitharamu

ಇತ್ತೀಚೆಗೆ, ಈ ಮಹಿಳೆಗೆ ಪದೇ ಪದೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದನಂತೆ. ಹಾಗಾಗಿ, ದಿನಕರ್ ಪತ್ನಿಗೆ ಸಂತ್ರಸ್ತೆ ಮಾಹಿತಿ ನೀಡಿದ್ದಾಳೆ ಎಂದು ಹೇಳಲಾಗಿದೆ. ಈ ವೇಳೆ, ದಿನಕರ್‌ ಮೊಬೈಲ್‌ ಚೆಕ್‌ ಮಾಡಿದಾಗ ರಾಸಲೀಲೆ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿರ್ಮಾಪಕ ದಿನಕರ್ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಹಾಗಾಗಿ, ದಿನಕರ್ ಪತ್ನಿ ಮತ್ತು ಸಂತ್ರಸ್ತ ಮಹಿಳೆ ಠಾಣೆಗೆ ದೂರು ನೀಡಿದ್ದು ಆರೋಪಿ ದಿನಕರ್ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ.

ಮಾರುತ್ ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!