January 4, 2025

Newsnap Kannada

The World at your finger tips!

police 1

ಚೀರನಹಳ್ಳಿಯಲ್ಲಿ ನವ ವಿವಾಹಿತರಿಗೆ ಕಿರುಕುಳ ನೀಡಿದ ಗ್ರಾಮಾಂತರ ಪೋಲಿಸರು : ನೆರವಿಗೆ ಧಾವಿಸಿದ ಮಂಡ್ಯ SP

Spread the love

ಮಂಡ್ಯ ಗ್ರಾಮಾಂತರ ಪೋಲಿಸ್ ಠಾಣೆಯ ಪೋಲಿಸರು ಪ್ರೀತಿಸಿ ಮದುವೆಯಾದ ಯುವ ಜೋಡಿಯ ಜೊತೆ ರಾತ್ರೋ ರಾತ್ರಿ
ಅಮಾನುಷವಾಗಿ ನಡೆದುಕೊಂಡಿರುವ ಘಟನೆ ಮಂಡ್ಯ ತಾಲ್ಲೂಕಿನ ಚೀರನಹಳ್ಳಿಯಲ್ಲಿ ಜರುಗಿದೆ.

ಕಳೆದ ಮದ್ಯರಾತ್ರಿ ಎರಡು ಗಂಟೆಗೆ ಚೀರನಹಳ್ಳಿಗೆ ಬಂದ ಮಂಡ್ಯ ಗ್ರಾಮಾಂತರ ಠಾಣೆ ಪೋಲಿಸರು ಮತ್ತು ಶಿಡ್ಲಘಟ್ಟ ಪೋಲಿಸರು ಹುಡುಗನ ಮನೆಗೆ ರೌಡಿಗಳ ರೀತಿಯಲ್ಲಿ ಮೆರೆದು ಅಕ್ಷರಶಃ ದಮಕಿ ಹಾಕಿ ಗ್ರಾಮಾಂತರ ಠಾಣೆಗೆ ಕರೆದುಕೊಂಡು ಹೋದರು.

ಇದನ್ನು ಓದಿ – ಎಲ್ಲರೂ ಯೋಗಾಭ್ಯಾಸದಲ್ಲಿ ತೊಡಗಬೇಕು ಎಂಬ ಮನವಿ : ಹಲವು ಭಾಷೆಗಳಲ್ಲಿ ಪ್ರಧಾನಿ ಟ್ವಿಟ್

ಗಂಗಾ ಮತಸ್ಥ ಜಾತಿಗೆ ಸೇರಿದ ಚೀರನಹಳ್ಳಿಯ ಬಲ್ಲೇಶ್ , ಅನ್ಯ ಜಾತಿಯ ಶಿಡ್ಲಘಟ್ಟದ ಪದವೀಧರೆ ಭಾಗ್ಯ ಎರಡು ವರ್ಷಗಳಿಂದ ಸಾಮಾಜಿಕ ಜಾಲ ತಾಣದಲ್ಲಿ ಪರಿಚಯವಾದ ನಂತರ ಪ್ರೀತಿಸಲು ಆರಂಭಿಸಿ ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡಿ, ಜೂನ್ 8 ರಂದು ರಿಜಿಸ್ಟರ್ ಮದುವೆಯಾಗಿ ಚೀರನಹಳ್ಳಿಗೆ ಬಂದರು.

WhatsApp Image 2022 06 13 at 8.41.23 AM

ಈ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪೋಲಿಸರು ಹುಡುಗನ ಜಾಡು ಹಿಡಿದು ಮಂಡ್ಯ ಗ್ರಾಮಾಂತರ ಪೋಲಿಸರ ಸಹಕಾರದೊಂದಿಗೆ ಮದ್ಯ ರಾತ್ರಿ, ಚೀರನಹಳ್ಳಿಯಲ್ಲಿರುವ ಹುಡುಗನ ಮನೆ ಮೇಲೆ ದಾಳಿ ಮಾಡಿದ್ದಾರೆ ಮಹಿಳಾ ಪೇದೆ ಜೊತೆಯಲ್ಲಿ ಕರೆದು ತರದೇ ನವ ಜೋಡಿಗಳನ್ನು ಠಾಣೆಗೆ ಕರೆದುಕೊಂಡು ಹೋದರು.

ಪೊಲೀಸರ ನಡುವಳಿಕೆಯನ್ನು ಖಂಡಿಸಿ ವಕೀಲರಾದ ಲಕ್ಷ್ಮಣ್ ಚೀರನಹಳ್ಳಿ, ಜಿಲ್ಲಾಪಂಚಾಯಿತ್ ಮಾಜಿ ಸದಸ್ಯ ಮಂಜುನಾಥರವರು ಮಧ್ಯ ಪ್ರವೇಶಿಸಿ ಮುಂದಾಗುವ ಅನಾಹುತಕ್ಕೆ ತಡೆಯೊಡ್ಡಿದರು.

ರಾತ್ರಿ ಎರಡು ಗಂಟೆ ರಾತ್ರಿಯಲ್ಲಿ ಘಟನೆಯ ಕುರಿತು ವಿವರಿಸಲು ಮಂಡ್ಯ ಎಸ್ ಪಿ ಯತೀಶ್ ರವರಿಗೆ ವಕೀಲ ಲಕ್ಷ್ಮಣ್ ಚೀರನಹಳ್ಳಿ ಪೋನಾ ಮಾಡಿದಾಗ ಆಹೊತ್ತಿನಲ್ಲೂ ಪ್ರತಿಕ್ರಿಯೆ ನೀಡಿರುವ ಮಂಡ್ಯ ಎಸ್ ಪಿ ಯತೀಶ್ ರವರು ಘಟನೆ ಮತ್ತು ಪ್ರೇಮಿಗಳ ಪರ ಅಧಿಕಾರಿಗಳು ಗಮನ ಹರಿಸುವಂತೆ ಮತ್ತು ತೊಂದರೆಯಾಗದಂತೆ ನೆರವಿಗೆ ನಿಂತು ದೊಡ್ಡತನ ಮೆರೆದಿದ್ದಾರೆ.

ಒಟ್ಟಿನಲ್ಲಿ ಪ್ರೇಮಿಸುವುದೇ ಅಪರಾಧ ಎಂಬಂತೆ ಕ್ಷಣಕ್ಕೊಂದು ಮರ್ಯಾದ ಹತ್ಯೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಪೋಲಿಸರು ಇಲಾಖೆ ಗಮನಹರಿಸಬೇಕು ಎಂಬ ಒತ್ತಾಯ ನಾಯಕರದ್ದು.

Copyright © All rights reserved Newsnap | Newsever by AF themes.
error: Content is protected !!