ಸ್ಯಾಂಡಲ್‍ವುಡ್ ನಟ ಸತ್ಯಜಿತ್ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಹಿನ್ನಲೆಯಲ್ಲಿ ತಂದೆಯ ವಿರುದ್ಧವೇ ಮಗಳು ಅಖ್ತಾರ್ ಸ್ವಲೇಹಾ ಬಾಣಸವಾಡಿ ಪೋಲಿಸರಿಗೆ ದೂರು ನೀಡಿದ್ದಾಳೆ.
ನಟ, ತಂದೆ ಸತ್ಯಜಿತ್ ಹಣ ಕೊಡುವಂತೆ ಪ್ರತಿನಿತ್ಯ ಪೀಡಿಸುತ್ತಾ ಕಿರುಕುಳ ನೀಡುತ್ತಿದ್ದಾರೆ ಎಂದು ಮಗಳು ಬಾಣಸವಾಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಅಪ್ಪನ ಜೀವನಾಂಶಕ್ಕೆ ಪ್ರತಿ ತಿಂಗಳೂ 1 ಲಕ್ಷ ರೂಪಾಯಿ ದುಡ್ಡು ಕೊಡುತ್ತಿದ್ದೆ. ನಾನೀಗ ತುಂಬು ಗರ್ಭಿಣಿ, ಕೆಲಸಕ್ಕೆ ಹೋಗುತ್ತಿಲ್ಲ. ಹೀಗಾಗಿ ಮೊದಲಿನ ಹಾಗೆ ಹಣ ಸಹಾಯ ಮಾಡಲಾಗುತ್ತಿಲ್ಲ. ಹಣ ಕೊಡೋದು ನಿಲ್ಲಿಸಿದ್ದರಿಂದ ಅಪ್ಪನ ಟಾರ್ಚರ್ ಕೊಡಲು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿದಿನ ಬೆದರಿಕೆ ಕರೆಗಳು ಬರುತ್ತಿವೆ. ತಂದೆ ಸತ್ಯಜಿತ್ ಇದನ್ನೆಲ್ಲಾ ಮಾಡಿಸುತ್ತಿ ದ್ದಾರೆ ಎಂಬುದು ಮಗಳ ಆರೋಪ.
ಸತ್ಯಜಿತ್ ಮಗಳು ಅಖ್ತರ್ ಸ್ವಲೇಹಾ ವೃತ್ತಿಯಲ್ಲಿ ಪೈಲಟ್. ಪ್ರತಿಷ್ಠಿತ ಏರ್ ಲೈನ್ಸ್ ನಲ್ಲಿ ಕಂಪನಿಯಲ್ಲಿ ಪೈಲಟ್ ಆಗಿರುವ ಸ್ವಲೇಹಾ ಪ್ರತಿ ತಿಂಗಳು ಸತ್ಯಜಿತ್‍ಗೆ 1 ಲಕ್ಷ ಕೊಡುತ್ತಿದ್ದೇನೆ. ಆದರೆ ಈದೀಗ ಹಣ ಕೊಡಲು ಆಗುತ್ತಿಲ್ಲ ತಂದೆ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ.
ಆರೋಪ ನಿರಾಧಾರ – ಸತ್ಯಜಿತ್ :
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
ನಾನು ಮಗಳಿಂದ ಯಾವುದೇ ಹಣ ಕೇಳಿಲ್ಲ. ಮಗಳನ್ನು ಬಳಸಿ ಯಾರೋ ನನಗೆ ಡ್ಯಾಮೇಜ್ ಮಾಡಿದ್ದಾರೆ. ಮಗಳ ವಿದ್ಯಾಭ್ಯಾಸಕ್ಕೆ ಮನೆ ಮಾರಿದ್ದೇನೆ. ಮನೆ ಬಿಡಿಸಿಕೊಡಲು ಹೇಳಿದ್ದೇ ಅಷ್ಟೇ. ಸಾಯೋ ಟೈಮ್‍ನಲ್ಲಿ ಮಗಳ ಏಳಿಗೆ ಬಯಸುತ್ತೇನೆ. ಮಗಳೇ ನನ್ನ ವಿರುದ್ಧ ನಿಲ್ತಾಳೆ ಅಂತಾ ಅನ್ಕೊಂಡು ಇರಲಿಲ್ಲ ಎಂದು ಮಗಳ ಆರೋಪ ಕೇಳಿ ತಂದೆ ಸತ್ಯಜಿತ್ ಕಣ್ಣೀರು ಹಾಕಿದ್ದಾರೆ.
More Stories
ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು