ಪೇಜಾವರ ಶ್ರೀ ಕುರಿತು ಹೇಳಿಕೆ ದಾಖಲಿಸಲು ಪೊಲೀಸ್ ಠಾಣೆಗೆ ಭೇಟಿ ಹೇಳಿಕೆ ನೀಡುವ ವೇಳೆ ಮಾಹಾಗುರು, ಸಂಗೀತ ನಿರ್ದೇಶಕ ಹಂಸಲೇಖ ಕಣ್ಣೀರಿಟ್ಟಿದ್ದಾರೆ.
ಬಹಿರಂಗವಾಗಿ ಸಭೆಯಲ್ಲಿ ಶ್ರೀಗಳ ಅಪಚಾರವಾಗುವಂತೆ
ಯಾಕೆ ಹೀಗೆ ಹೇಳಿಕೆ ನೀಡಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಹಂಸಲೇಖ ಅವರು, ಯಾಕೆ ಹಾಗೇ ಹೇಳಿದೆನೋ ನಂಗ ಗೊತ್ತೇ ಆಗಲಿಲ್ಲ. ಯಾವ ಉದ್ದೇಶವು ಇರಲಿಲ್ಲ ಎಂದು ಪೋಲಿಸರ ಮುಂದೆ ಹೇಳಿಕೆ ನೀಡಿದರಂತೆ.
ನಾನು ಆ ಸಮಾರಂಭದಲ್ಲಿ
ಮಾತನಾಡುವ ಭರಾಟೆಯಲ್ಲಿ ಹಾಗೆ ಹೇಳಿಬಿಟ್ಟೇ. ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ ವ್ಯಕ್ತಪಡಿಸಿದಳು. ನನ್ನ 70 ವರ್ಷದ ಜೀವನದಲ್ಲಿ ಎಂದಿಗೂ ಹೀಗೆ ಮಾಡಿಕೊಂಡಿರಲಿಲ್ಲಾ. ತಪ್ಪಾಗಿದೆ ಎಂದು ಹೇಳಿದರಂತೆ.
ನನ್ನ ಹೇಳಿಕೆಯಿಂದ ಯಾವ ಧರ್ಮ, ಜಾತಿಯ ನಿಂದಿಸುವ ಉದ್ದೇಶ ಇರಲಿಲ್ಲ ಎಂದು ಹೇಳಿದರಂತೆ.
ಈ ಘಟನೆಯಿಂದ ತನಗೆ ತುಂಬಾ ನೋವಾಗಿದೆ. ನನ್ನ ಕೆಲಸದಲ್ಲೂ ಸೆಟ್ ಬ್ಯಾಕ್ ಆಗಿದೆ. ನಾನು ಈ ಘಟನೆಯಿಂದ ತುಂಬಾ ನೋವು ಅನುಭವಿಸಿದ್ದೇನೆ ಎಂದು ತನಿಖಾಧಿಕಾರಿಗಳ ಮುಂದೆ ಕಣ್ಣೀರಿಟ್ಟರಂತೆ. ನಂತರ ಒಂದೈದು ನಿಮಿಷ ಸುಧಾರಿಸಿಕೊಂಡು ಠಾಣೆಯಿಂದ ಹೊರಟು ಹೋದರು.
ಠಾಣೆಯಿಂದ ಹೊರಡುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ
ಹಂಸಲೇಖ ಅವರು, ಏನು ಇಲ್ಲಮ್ಮ, ಏನು ಇಲ್ಲ ತಾಯಿ, ಎಲ್ಲರಿಗೂ ನಮಸ್ಕಾರ ಎಂದು ಕೈ ಮುಗಿದು ಹೊರಟರು.
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ
- 100 ಕೋಟಿ ವಂಚನೆ ಪ್ರಕರಣ: ದೆಹಲಿಯಲ್ಲಿ ಚೀನಾ ಪ್ರಜೆ ಬಂಧನ
- ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ : ಸಚಿವ ಜಾರ್ಜ್ ಪ್ರಕಟ
- ಶಬರಿಮಲೈ ಭಕ್ತರಿದ್ದ ಬಸ್ ಪಲ್ಟಿ: ರಾಜ್ಯದ 27 ಮಂದಿ ಗಾಯ
- ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರತ ತಂಡದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಭೇಟಿ
More Stories
ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ
100 ಕೋಟಿ ವಂಚನೆ ಪ್ರಕರಣ: ದೆಹಲಿಯಲ್ಲಿ ಚೀನಾ ಪ್ರಜೆ ಬಂಧನ
ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ : ಸಚಿವ ಜಾರ್ಜ್ ಪ್ರಕಟ