December 26, 2024

Newsnap Kannada

The World at your finger tips!

hallegere shankar

ಹಲ್ಲೇಗೆರೆ ಶಂಕರ್,ಅಳಿಯ ಶ್ರೀನಾಥ್ ರನ್ನು ವಶಕ್ಕೆ ಪಡೆದ ಪೋಲಿಸರು

Spread the love

ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಯಜಮಾನ
ಹಲ್ಲೇಗೆರೆ ಶಂಕರ್ , ಅಳಿಯ ಶ್ರೀನಾಥ್ ರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ತಿಗುಳರಪಾಳ್ಯದ ನಿವಾಸದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೀ ಮನೆ ಮಾಲೀಕ ಹಲ್ಲೇಗೆರೆ ಶಂಕರ್ ಹಾಗೂ ಆತನ‌ ಅಳಿಯ ಶ್ರೀನಾಥ್ ನನ್ನು ಬ್ಯಾಡರಹಳ್ಳಿ ಪೋಲಿಸರು ವಶದಲ್ಲಿದ್ದಾರೆ. ವಿಚಾರಣೆ ಆರಂಭವಾಗಿದೆ.

ಮನೆ ಮಾಲೀಕ ಶಂಕರ್ ಹಾಗೂ ಮೃತ ಸಿಂಧೂರಾಣಿ ಪತಿ, (ಅಳಿಯ) ಶ್ರೀನಾಥ್ ಕಿರುಕುಳ ಹಾಗೂ ಪ್ರಚೋದನೆ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ.

ಇವರಿಬ್ಬರ ಕಿರುಕುಳದ ಬಗ್ಗೆ ಇಡೀ ಕುಟುಂಬದ ಸದಸ್ಯರು ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

Copyright © All rights reserved Newsnap | Newsever by AF themes.
error: Content is protected !!