January 29, 2026

Newsnap Kannada

The World at your finger tips!

shashi kumar

50 ಲಕ್ಷ ರುಗಾಗಿ ಕಿಡ್ನಾಪ್​​ ಮಾಡಿ ಸಿಕ್ಕಿಬಿದ್ದ ‘ಹಾಫ್ ಮೆಂಟ್ಲು’​​ ನಿರ್ಮಾಪಕನ ಬಂಧನ

Spread the love

ಸಿನಿಮಾ ಸ್ಟೈಲ್​ನಲ್ಲಿ ಕಿಡ್ನಾಪ್​ ಮಾಡಿ ಸಿಕ್ಕಿಬಿದ್ದ ಚಿತ್ರರಂಗ ನಿಮಾ೯ಪಕ ಶಶಿಕುಮಾರ್ ಬಂಧಿಸಲಾಗಿದೆ.

ಹಾಡ ಹಗಲೇ ಈರುಳ್ಳಿ ವ್ಯಾಪಾರಿ ಶ್ರೀನಿವಾಸನ್ ಅಪಹರಣ ಮಾಡಿದ್ದರು.

ಐಟಿ ಅಧಿಕಾರಿಗಳ ವೇಷ ಧರಿಸಿ ಶ್ರೀನಿವಾಸನ್​​ ಕಿಡ್ನಾಪ್ ಮಾಡಲಾಗಿತ್ತು. ಶಶಿಕುಮಾರ್​​​ ತಂಡ 50 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿತ್ತು. ಹಣ ಕೊಡದಿದ್ದಾಗ ಹಲ್ಲೆ ಮಾಡಿ ಮೇಖ್ರಿ ಸರ್ಕಲ್​ ಬಳಿ ಬಿಡಲಾಗಿತ್ತು ಎಂದು ಹೇಳಲಾಗಿದೆ .

ಈ ಹಿನ್ನೆಲೆಯಲ್ಲಿ ಹಾಫ್​ ಮೆಂಟ್ಲು ಚಿತ್ರದ ನಿರ್ಮಾಪಕ ಶಶಿಕುಮಾರ್ ಸೇರಿ ನಾಲ್ವರ ವಶಕ್ಕೆ ಪಡೆಯದಿದ್ದರು. ಬಳಿಕ ಬಂಧಿಸಲಾಗಿದೆ.

ವಿಚಾರಣೆ ವೇಳೆ ಕಿಡ್ನಾಪ್ ಸ್ಟೋರಿ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಸೆಪ್ಟಂಬರ್ 30ರಂದು ಹಾಡಹಗಲೇ ನಡೆದಿತ್ತು ಕಿಡ್ನಾಪ್. ಹಗಲಿನಲ್ಲೇ ಈರುಳ್ಳಿ ವ್ಯಾಪಾರಿ ಶ್ರೀನಿವಾಸನ್ ಎಂಬುವವರ ಅಪಹರಣ ಮಾಡಲಾಗಿತ್ತು.

ಚಿತ್ರ ಮಾಡಿ ಲಾಸ್​ ಆಗಿ ಹಣಕ್ಕಾಗಿ ಓಡಾಡಿಕೊಂಡಿದ್ದರು ಶಶಿಕುಮಾರ್.​ ಕಿಡ್ನಾಪ್ ಮಾಡೋದಕ್ಕೆ 1 ವಾರ ಪ್ಲಾನಿಂಗ್ ಮಾಡಿದ್ದರಂತೆ. ಪಕ್ಕಾ ಸಿನಿಮಾ ಶೈಲಿಯಲ್ಲೇ ಹಾಡ ಹಗಲೇ ವ್ಯಾಪಾರಿಯ ಅಪಹರಣ ಮಾಡಿದ್ದರು. ತನ್ನ ಸಹಚರರ ಜೊತೆ ಸೇರಿ ಶ್ರೀನಿವಾಸನ್ ಕಿಡ್ನಾಪ್ ಮಾಡಲು ಪ್ಲಾನ್ ಮಾಡಿದ್ದರು.

ಮಹಾಲಕ್ಷ್ಮಿ ಲೇಔಟ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!