ಪಾಕ್‌ನ ಐಎಸ್‌ಐ(ಇಂಟರ್ ಸರ್ವೀಸಸ್ ಇಂಟಲಿಜೆನ್ಸ್)ಗೆ ಭಾರತದ ಯುದ್ಧ ವಿಮಾನಗಳ ಮಾಹಿತಿಯನ್ನು ನೀಡಿ, ದೇಶದ್ರೋಹವೆಸಗುತ್ತಿದ್ದ ಹೆಚ್‌ಎಎಲ್(ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್)ನ ಉದ್ಯೋಗಿಯನ್ನು ಮಹಾರಾಷ್ಟ್ರದ ನಾಸಿಕ್‌ನ ರಾಜ್ಯ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ನ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದಿದೆ.
ಬಂಧಿತ ವ್ಯಕ್ತಿಯು ನಾಸಿಕ್‌ನ ಓಜರ್‌ನಲ್ಲಿರುವ ಎಚ್‌ಎಎಲ್‌ನ ವಿಮಾನ ಉತ್ಪಾದನಾ ಘಟಕ, ವಾಯುನೆಲೆ ಮತ್ತು ಉತ್ಪಾದನಾ ಘಟಕದೊಳಗಿನ ಕೆಲವು ನಿಷೇಧಿತ ಪ್ರದೇಶಗಳಿಗೆ ಸಂಬಂಧಿಸಿದ ಬಹು ಮುಖ್ಯವಾದ ಮತ್ತು ಅಷ್ಟೇ ಗೌಪ್ಯವಾದ ಮಾಹಿತಿಗಳನ್ನು ಹಾಗೂ ಭಾರತೀಯ ಯುದ್ಧ ವಿಮಾನಗಳ ರಹಸ್ಯ ಮಾಹಿತಿ, ಅವುಗಳ ಬಗೆಗಿನ ಸೂಕ್ಷ್ಮ ವಿವರಗಳನ್ನು ಐಎಸ್‌ಐಗೆ ಪೂರೈಸುತ್ತಿದ್ದ ಎಂದು ಎಸ್‌ಐಟಿ ಹೇಳಿದೆ.
ಈ ವ್ಯಕ್ತಿ 41ರ ಪ್ರಾಯದ ವ್ಯಕ್ತಿ ಎಂದು ಹೇಳಿರುವ ಎಟಿಎಸ್, ಭದ್ರತಾ ದೃಷ್ಠಿಯಿಂದ ಆತನ ಹೆಸರು, ಗುರುತನ್ನು ಬಿಟ್ಟುಕೊಟ್ಟಿಲ್ಲ.
ಆಪಾದಿತನನ್ನು ಅಧಿಕೃತ ರಹಸ್ಯ ಕಾಯ್ದೆಯಡಿ ಬಂಧಿಸಲಾಗಿದ್ದು, ಆರೋಪಿಗೆ ಸಂಬಂಧುಸಿದ ಐದು ಸಿಮ್ ಕಾರ್ಡ್‌ಗಳೊಂದಿಗೆ ಮೂರು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಮತ್ತು ಎರಡು ಮೆಮೊರಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಗೆ ಪರೀಕ್ಷೆಗೆ ಕಳುಹಿಸಲಾಗಿದೆ.
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ