January 9, 2025

Newsnap Kannada

The World at your finger tips!

H D Chowdiah PES Mandya

ಶಿಸ್ತು,ದಕ್ಷತೆಯ ಅಪ್ರತಿಮ ಆಡಳಿತಗಾರ ಮಂಡ್ಯದ ಮುತ್ಸದ್ದಿ ಎಚ್. ಡಿ .ಚೌಡಯ್ಯ ಅಸ್ತಂಗತ

Spread the love

ಜನತಾ ಶಿಕ್ಷಣ ಸಂಸ್ಥೆಯ (ಪಿಇಟಿ ) ಮಾಜಿ ಅಧ್ಯಕ್ಷ , ಮಾಜಿ ಶಾಸಕ, ಹಿರಿಯ ಮತ್ಸದ್ದಿ, ಬದ್ದತೆ, ದಕ್ಷ , ಶಿಸ್ತಿನ ಆಡಳಿತ
ಎಚ್ ಡಿ ಚೌಡಯ್ಯನವರು (94) ಮಂಗಳವಾರ ಮಧ್ಯರಾತ್ರಿ ನಂತರ 2.30 ರ ಸುಮಾರಿಗೆ ಸ್ವ ಗ್ರಾಮ ಹೊಳಲಿನಲ್ಲಿ ಕೊನೆಯುಸಿರೆಳೆದರು.

WhatsApp Image 2022 02 16 at 4.51.44 AM

ಪತ್ನಿ ದೊಡ್ಡಲಿಂಗಮ್ಮನವರ ಅಗಲಿಕೆಯ ನಂತರ ತೀವ್ರವಾಗಿ ಕ್ಷಿಣಿಸಿದ್ದ ಚೌಡಯ್ಯನವರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು. ಅಪಾರ ಬಂಧು ಬಳಗ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

1928 ರಲ್ಲಿ ಜನಿಸಿದ ಚೌಡಯ್ಯ ಬಿಎಸ್ಸಿ (ಅಗ್ರಿ) ಪದವೀಧರರಾಗಿದ್ದರು. ಆಗಿನ ಕಾಲದಲ್ಲಿ ತಾಲೂಕು ಬೋರ್ಡ್ ಮೆಂಬರ್ ಹಾಗೂ ಅಧ್ಯಕ್ಷರಾಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ 4 ಬಾರಿ ಕೆರಗೋಡು ಕ್ಷೇತ್ರದ ಶಾಸಕರಾಗಿ, 2ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

1989 ರಲ್ಲಿ ಮಂಡ್ಯದ ಪಿಎಸ್ ಇ ಟ್ರಸ್ಟ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಚೌಡಯ್ಯನರು 31 ವಷ೯ಗಳ ಕಾಲ ಸುದೀರ್ಘ ಆಡಳಿತ ನಡೆಸಿದರು. ನಿತ್ಯ ಸಚಿವ ದಿ ಕೆ ವಿ ಶಂಕರಗೌಡರು ಹಾಗೂ ಚೌಡಯ್ಯನವರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ ಶಂಕರಗೌಡರು ಮಾತ್ರ ಚೌಡಯ್ಯನವರನ್ನೇ ಉತ್ತರ ಅಧಿಕಾರಿ ಮಾಡಿ ಪಿಇಎಸ್ ಟ್ರಸ್ಟ್ ನ ಸಮಗ್ರ ಅಭಿವೃದ್ದಿಗೆ ಕಾರಣರಾದರು.

ಆಡಳಿತದಲ್ಲಿ ದಕ್ಷತೆ , ಶಿಸ್ತು , ಬದ್ದತೆ ರೂಢಿಸಿಕೊಂಡೇ ರಾಜಕಾರಣ ಮತ್ತು ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬಂದ ಚೌಡಯ್ಯನವರಿಗೆ ಅಪಾರ ಅಭಿಮಾನಿ ಬಳಗವಿದೆ. ನಿತ್ಯ ಸಚಿವ ದಿ ಶಂಕರಗೌಡರು , ಜಿ ಮಾದೇಗೌಡರು, ಕರಡಹಳ್ಳಿ ಶಿಂಗಾರಿಗೌಡರು,ಎಸ್ ಎಂ ಕೃಷ್ಣ ಸೇರಿದಂತೆ ಮಂಡ್ಯದ ಅನೇಕ ಮುತ್ಸದ್ದಿ ರಾಜಕಾರಣಿಗಳ ಜೊತೆ ಒಂದೇ ಗರಡಿಯಲ್ಲಿ ಬೆಳೆದ ಚೌಡಯ್ಯನವರು ಮಂಡ್ಯದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ.

ಮಂಡ್ಯದ ತೂಬಿನಕೆರೆಯಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಘಟಕ ಸ್ಥಾಪಿಸಲು, ಮಂಡ್ಯದ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ,ಸೇರಿದಂತೆ ಮಂಡ್ಯದ ಅಭಿವೃದ್ದಿಗೆ ಪ್ರಮುಖ ಪಾತ್ರವಹಿಸಿದ್ದರು.

ರಾಜಕಾರಣ ಮಾತ್ರವಲ್ಲದೇ ಶಿಕ್ಷಣ , ಕ್ರೀಡೆ, ರಂಗಭೂಮಿ ಕ್ಷೇತ್ರ ಸೇರಿ ಗ್ರಾಮೀಣ ಪ್ರದೇಶದ ನಾಟಕಗಳಿಗೆ ಪ್ರೋತ್ಸಾಹ ನೀಡಿ ಸೈ ಎನಿಸಿಕೊಂಡ ಚೌಡಯ್ಯ, ಬದುಕಿದ್ದಾಗಲೇ ಪಿಇಎಸ್ ಎಂಜನಿಯರಿಂಗ್ ಕಾಲೇಜಿನ ಆವರಣದಲ್ಲಿ ಪ್ರತಿಮೆ ಸ್ಥಾಪನೆ ಮಾಡಿಕೊಂಡು ವಿವಾದವನ್ನು ಮಾಡಿಕೊಂಡರು.

ಕಾವೇರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಚೌಡಯ್ಯನವರು ನೀರಿನ ಹಕ್ಕಿಗಾಗಿ ಪ್ರತಿಭಟನೆ ಚಳುವಳಿ ಹೋರಾಟಗಳಲ್ಲೂ ಪಾಲ್ಗೊಂಡು ರೈತರ ಹಿತರಕ್ಷಣೆ ಮಾಡಿದ ಕೀರ್ತಿಯೂ ಚೌಡಯ್ಯನವರದಾಗಿದೆ.

Copyright © All rights reserved Newsnap | Newsever by AF themes.
error: Content is protected !!