ಚಂದ್ರಶೇಖರ್ ಗುರೂಜಿಗೆ ಸೇರಿದ ಯಾವುದೇ ಬೇನಾಮಿ ಆಸ್ತಿ ನನ್ನ ಹೆಸರಿನಲ್ಲಿ ಇಲ್ಲ.ನಾವು ಗುರೂಜಿ ಅವರನ್ನು ದೇವರಂತೆ ಕಾಣುತ್ತಿದ್ದೆವು ಎಂದು ಗುರೂಜಿ ಭೀಕರ ಹತ್ಯೆ ನಡೆಸಿದ ಹಂತಕ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಹಂತಕ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ಮಾತನಾಡಿ ಗುರೂಜಿ ನಮ್ಮ ಮನೆಯ ದೇವರು, ನಮ್ಮ ತಂದೆ ತರಹ. ಗುರೂಜಿ ನನಗೆ ಯಾವುದೇ ಆಸ್ತಿ ನೀಡಿಲ್ಲ. ಅಪಾರ್ಟ್ಮೆಂಟ್ ಕೂಡ ಗುರೂಜಿ ಅವರ ಹೆಸರಿನಲ್ಲಿದೆ. ಆದರೆ ಒಂದು ಫ್ಲಾಟ್ ಮಾತ್ರ ನಮ್ಮದಾಗಿದೆ. ಅದನ್ನು 20 ಲಕ್ಷ ರೂಪಾಯಿ ಸಾಲ ಮಾಡಿ ಖರೀದಿಸಿದ್ದೇವೆ. ನನ್ನ ಮತ್ತು ಗಂಡನ ಹೆಸರಿನಲ್ಲಿ ಯಾವುದೇ ಬೇನಾಮಿ ಆಸ್ತಿ ಇಲ್ಲ ಎಂದಿದ್ದಾರೆ.
ಗುರೂಜಿಯನ್ನು ನನ್ನ ಗಂಡ ಹೀಗೆ ಹತ್ಯೆ ಮಾಡುತ್ತಾರೆ ಎಂದು ಕನಸ್ಸಿನಲ್ಲಿಯೂ ಕೂಡ ಅಂದುಕೊಂಡಿರಲಿಲ್ಲ. ಗುರೂಜಿ ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದರು. ಕೆಲಸ ಮಾಡುವ ಪ್ರತಿಯೊಬ್ಬರನ್ನು ಕೂಡ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಇಲ್ಲಿವರೆಗೂ ಯಾವತ್ತು ಯಾರಿಗೂ ಗುರೂಜಿ ಮೋಸ ಮಾಡಿಲ್ಲ ಎಂದಿದ್ದಾರೆ.
ಚಂದ್ರಶೇಖರ ಗುರೂಜಿ ಮೂಲ ಬಾಗಲಕೋಟೆ, ವಾಸ ಮುಂಬೈ – ಸಾವಿರಾರು ಕೋಟಿ ಒಡೆಯನ ಅಂತ್ಯಕ್ರಿಯೆ ಇಂದು
ಈ ಘಟನೆಗೂ ಮುನ್ನ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ನನ್ನ ಪತಿ 3 ದಿನದಿಂದ ಮನೆಗೆ ಬಂದಿರಲಿಲ್ಲ. ಹತ್ಯೆ ಮಾಡುವ ಮಟ್ಟಿಗೆ ನನ್ನ ಗಂಡ ಇಳಿಯುತ್ತಾನೆಂದು ಅಂದುಕೊಂಡಿರಲಿಲ್ಲ ಎಂದರು.
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
More Stories
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ