ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ವರ್ಷಕ್ಕಾಗಿ ಬೋಧನಾ ಕಾರ್ಯ ನಿರ್ವಹಿಸಲು ಅಗತ್ಯವಿರುವ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಲು ಕಾಲೇಜು ಶಿಕ್ಷಣ ಇಲಾಖೆ ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಅರ್ಜಿ ಆಹ್ವಾನಿಸಿದೆ.
2024-25ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು (ಸರ್ಕಾರಿ ಸಂಸ್ಕೃತ ಮತ್ತು ಚಿತ್ರಕಲಾ ಕಾಲೇಜುಗಳು ಸೇರಿ) ಖಾಲಿ ಇರುವ ಬೋಧನಾ ಕಾರ್ಯಭಾರವನ್ನು ಭರ್ತಿ ಮಾಡಲು ಈ ನೇಮಕಾತಿ ನಡೆಯಲಿದೆ. ಸರ್ಕಾರದ ಆದೇಶದ ಪ್ರಕಾರ, ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಯುವ ಕಾರ್ಯಭಾರಕ್ಕಾಗಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಲಾಗುತ್ತದೆ.
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಲು ಯುಜಿಸಿ 2018ರ ಮಾರ್ಗಸೂಚಿಗಳ ಪ್ರಕಾರ, ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಶೇ 55% ಅಂಕಗಳು (ಎಸ್‌ಸಿ/ಎಸ್‌ಟಿಐ/ಒಬಿಸಿ/ವಿಶೇಷ ಚೇತನರಿಗೆ ಶೇ 50%) ಹೊಂದಿರಬೇಕು.
NET/ SLET/ KSET/ ಪಿಹೆಚ್.ಡಿ ಅರ್ಹತೆ ಅಗತ್ಯ.
2021ರ ಸರ್ಕಾರದ ಆದೇಶದ ಪ್ರಕಾರ, ಅರ್ಹತೆಗಳಿಲ್ಲದ ಉಪನ್ಯಾಸಕರಿಗೆ ಮೂರು ವರ್ಷಗಳ ಕಾಲಾವಧಿ ನಿಗದಿಪಡಿಸಲಾಗಿದೆ. ಈ ಅವಧಿಯ ನಂತರ ಅರ್ಹತೆಗಳನ್ನು ಪೂರೈಸದೇ ಇರುವವರು ನೇಮಕಾತಿಗೆ ಅನರ್ಹರಾಗುತ್ತಾರೆ.
ಅತಿಥಿ ಉಪನ್ಯಾಸಕರ ಸೇವಾ ನಿಯಮಗಳು:
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 1, 3, 5ನೇ ಸೆಮಿಸ್ಟರ್ ಮುಗಿಯುತ್ತಿದ್ದಂತೆ 2, 4, 6ನೇ ಸೆಮಿಸ್ಟರ್ ಆರಂಭವಾಗುತ್ತಿದ್ದು, ಅವಶ್ಯಕತೆಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಲಾಗುವುದು.
Maternity Leave ಪಡೆದ ಅತಿಥಿ ಉಪನ್ಯಾಸಕರ ಸ್ಥಾನಕ್ಕೆ ತಾತ್ಕಾಲಿಕ ಬದಲಿ ಉಪನ್ಯಾಸಕರನ್ನು ನಿಯೋಜಿಸಲಾಗುತ್ತದೆ.
ಖಾಯಂ ಉಪನ್ಯಾಸಕರ ನಿಯೋಜನೆ/ ವರ್ಗಾವಣೆ/ ಮರುಹಂಚಿಕೆ ನಡೆದಾಗ ಅಥವಾ ಕಾರ್ಯಭಾರ ಕಡಿಮೆಯಾಗಿದೆಯಾದರೆ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ.
ಕೊನೆಯ ದಿನಾಂಕ: ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದ ಮಾಹಿತಿಯನ್ನು ವಿದ್ಯಾರ್ಥಿಗಳು ಪ್ರತಿದಿನ ಅಂತರ್ಜಾಲ ತಾಣದಲ್ಲಿ ಪರಿಶೀಲಿಸಬೇಕು. ಈ ಕುರಿತಂತೆ ಅಧಿಸೂಚನೆಗಳು ಮತ್ತು ಸರ್ಕಾರದ ಆದೇಶಗಳು ಜಾರಿ ಮಾಡುವ ಪ್ರಮಾಣಕ್ಕೆ ಅನುಗುಣವಾಗಿ ಪಾಲಿಸಬೇಕಾಗುತ್ತದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು