November 24, 2024

Newsnap Kannada

The World at your finger tips!

siddaramiah

ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ : ಸಿಎಂ ಸಿದ್ದರಾಮಯ್ಯ

Spread the love

ಬೆಂಗಳೂರು : ಐದು ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆಯ ಬಳಿಕ ನಿಂತು ಹೋಗುತ್ತವೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದು , ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

ನಾವು ಗ್ಯಾರಂಟಿ ಯೋಜನೆ ಬಡವರಿಗಾಗಿ ಜಾರಿ ಮಾಡಿದ್ದು , ಹಾಗಾಗಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮದೊಂದಿಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ. ಗ್ಯಾರಂಟಿ ಯೋಜನೆಗಳು ಪುನರ್ ಪರಿಶೀಲನೆಯೂ ಆಗುವುದಿಲ್ಲ , ತಕ್ಕಾಗಿ ನಾವು ಗ್ಯಾರಂಟಿ ಯೋಜನೆ ಜಾರಿಗೆ ತಂದಿಲ್ಲ. ಬಡವರಿಗಾಗಿ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.ಕೇಂದ್ರ ಸಚಿವ V.ಸೋಮಣ್ಣ ಪುತ್ರನ ವಿರುದ್ಧ ‘FIR’ ದಾಖಲು

ಲೋಕಸಭೆ ಚುನಾವಣೆ ಬಗ್ಗೆ ಕೇಳಿದಾಗ , ಕಳೆದ ಬಾರಿ ನಮಗೆ ರಾಜ್ಯದಲ್ಲಿ ಕೇವಲ ಒಂದು ಸ್ಥಾನ ಬಂದಿತ್ತು, ಆದರೆ ಇದೀಗ ಒಂದರಿಂದ 9ಕ್ಕೆ ಏರಿದೆ. ಮೈಸೂರಲ್ಲಿ ನಮಗೆ ಸೋಲು ಆಗಿರಬಹುದು ಆದರೆ ಚಾಮರಾಜನಗರವನ್ನು ಗೆದ್ದಿದ್ದೇವೆ.ಮತಗಳಿಕೆ ವಿಚಾರದಲ್ಲಿ ಶೇಕಡಾ13ರಷ್ಟು ಹೆಚ್ಚಾಗಿದೆ ಎಂದು ಮಾತನಾಡಿದರು.

Copyright © All rights reserved Newsnap | Newsever by AF themes.
error: Content is protected !!