- 12 ಸ್ಥಾನ ಜಿಟಿಡಿ ಬಣಕ್ಕೆ, 3 ಸ್ಥಾನ ಎಚ್‌ಡಿಕೆ ಬಣಕ್ಕೆ: ಹಾಲಿ ಅಧ್ಯಕ್ಷರಿಗೆ ಸೋಲು
ಪ್ರತಿಷ್ಠೆಯ ಕಣವಾಗಿದ್ದ ಮೈಮುಲ್ (ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಣಕ್ಕೆ ಹಿನ್ನಡೆಯಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಬಣ ಭರ್ಜರಿ ಗೆಲುವು ಸಾಧಿಸಿದೆ.
ಒಟ್ಟು 15 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಜಿಟಿಡಿ ಬಣ ಗೆದ್ದರೆ 3 ಸ್ಥಾನಗಳಿಗೆ ಹೆಚ್‌ಡಿಕೆ ಬಣ ಸಮಾಧಾನ ಪಟ್ಟುಕೊಂಡಿದೆ.
ಆದರೆ ಅಧ್ಯಕ್ಷ ಸ್ಥಾನ ಎಚ್‌ಡಿಕೆ ಬಣದ ಪಾಲಾಗಿದೆ. ಹಾಲಿ ಅಧ್ಯಕ್ಷ ಜಿಟಿಡಿ ಆಪ್ತ ಮಾವನಹಳ್ಳಿ ಸಿದ್ದೇಗೌಡ ಅವರಿಗೆ ಸೋಲಾಗಿದೆ.
ಹುಣಸೂರು ಉಪವಿಭಾಗದ ಎಂಟಕ್ಕೆ ಎಂಟೂ ಸ್ಥಾನಗಳಲ್ಲಿ ಜಿಟಿಡಿ ಬಣ ಗೆದ್ದಿದ್ದು, ಮಾಜಿ ಸಚಿವ ಎಚ್.ಡಿ.ರೇವಣ್ಣ ಸಂಬಂಧಿ ಪಿರಿಯಾಪಟ್ಟಣ ಶಾಸಕ ಮಹದೇವು ಪುತ್ರನಿಗೆ ಸೋಲಾಗಿದೆ.
ಎಚ್.ಡಿ.ಕುಮಾರಸ್ವಾಮಿ ಪ್ರಚಾರದ ನಡುವೆಯೂ ಪ್ರಸನ್ನ ಗೆದ್ದಿದ್ದಾರೆ.
ಜಿಟಿಡಿ ಹಾಗೂ ಮಾಜಿ ಕುಮಾರಸ್ವಾಮಿಗೆ ಪ್ರತಿಷ್ಠೆಯಯಾಗಿದ್ದ ಈ ಚುನಾವಣೆಯ ಒಟ್ಟು 1,052 ಮತದಾರರ ಪೈಕಿ 1,051 ಸದಸ್ಯರು ಮತದಾನ ಮಾಡಿದ್ದರು.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್