ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಬಿಜೆಪಿ ಅಪಪ್ರಚಾರ ಮಾಡಬಹುದು, ಆದರೆ ನಾವು ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಿಸಿದ್ದೇವೆ. ತಾಲೂಕು ಪಂಚಾಯಿತಿ ಮೂಲಕ ಹಣ ಬಿಡುಗಡೆಯ ಪ್ರಕ್ರಿಯೆ ನಡೆಯುತ್ತಿರುವುದರಿಂದ ಸ್ವಲ್ಪ ವಿಳಂಬವಾಗಿದೆ. ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಹಣ ನಿಲ್ಲೋದಿಲ್ಲ. ನಾನು 8-10 ದಿನಗಳಲ್ಲಿ ಹಣ ಬಿಡುಗಡೆ ಆಗುತ್ತದೆ ಎಂದು ಹೇಳಿದ್ದೆ. ಈಗ 2 ದಿನ ಕಳೆದಿದ್ದು, ಇನ್ನೂ 8 ದಿನಗಳಲ್ಲಿ ಹಣ ಖಾತೆಗೆ ಜಮೆಯಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ತಪ್ಪಿತಸ್ಥರ ಮೇಲೆ ಕಠಿಣ ಕ್ರಮ
ಇದೇ ಸಂದರ್ಭದಲ್ಲಿ, ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ಕುರಿತು ಮಾತನಾಡಿದ ಅವರು, “ಘಟನೆಯ ಬಳಿಕ ಕೇವಲ 5 ನಿಮಿಷಗಳಲ್ಲಿ ನಾನು ಕಮೀಷನರ್ ಅವರನ್ನು ಸಂಪರ್ಕಿಸಿದ್ದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೆಂದರೆ ಅವರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಕನ್ನಡ ಭಾಷೆಯ ಕುರಿತು ಕೆಲವರು ರಾಜಕೀಯ ಮಾಡಲು ಹೊರಟಿದ್ದಾರೆ, ಇದು ಅಸಹ್ಯಕರ. ನಾವು ಮೊದಲು ಭಾರತೀಯರು, ನಂತರ ಕನ್ನಡಿಗರು. ಕೆಲವರು ಭಾಷಾ ವಿವಾದ ಎಳೆದು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ, ಇದನ್ನು ನಾನು ಖಂಡಿಸುತ್ತೇನೆ,” ಎಂದರು.ಇದನ್ನು ಓದಿ –ಬ್ಯಾಂಕ್ ಆಫ್ ಬರೋಡಾದಲ್ಲಿ 518 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಆಹ್ವಾನ
ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ ಎಂದು ಅವರು ತಿಳಿಸಿದ್ದಾರೆ. “ನಮ್ಮ ರಾಜ್ಯದ ಬಸ್ ಡ್ರೈವರ್‌ಗಳಿಗೆ ಬೆದರಿಕೆ ಹಾಕುವುದು ತಕ್ಷಣ ನಿಲ್ಲಿಸಬೇಕು. ಸ್ಥಳೀಯ ಸಿಪಿಐ ಈ ಪ್ರಕರಣವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ. ಅಲ್ಲದೆ, ಪೋಕ್ಸೋ ಪ್ರಕರಣ ದಾಖಲಿಸುವ ವೇಳೆ ಕೂಡ ಸ್ಥಳೀಯ ಸಿಪಿಐ ಸರಿಯಾದ ರೀತಿಯಲ್ಲಿ ಗಮನ ಹರಿಸಿಲ್ಲ. ಈ ಬಗ್ಗೆ ನಾನು ಗೃಹ ಸಚಿವರು ಹಾಗೂ ಡಿಜಿಪಿ ಅವರೊಂದಿಗೆ ಮಾತನಾಡುತ್ತೇನೆ” ಎಂದು ಸಚಿವೆ ಹೆಬ್ಬಾಳ್ಕರ್ ತಿಳಿಸಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು